ನವೆಂಬರ್ 2, 2013 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ರೋಹಿತ್ ಪ್ರಚಂಡ ದ್ವಿಶತಕ ಬಾರಿಸಿದರು. 158 ಎಸೆತಗಳನ್ನು ಎದುರಿಸಿದ್ದ ಹಿಟ್ಮ್ಯಾನ್ 209 ರನ್ ಚಚ್ಚಿದ್ದರು. ಈ ಇನ್ನಿಂಗ್ಸ್‌ನಲ್ಲಿ ರೋಹಿತ್ 12 ಬೌಂಡರಿ ಮತ್ತು 16 ಸಿಕ್ಸರ್ ಸಿಡಿಸಿದ್ದರು. ಅಂದರೆ ತಮ್ಮ ದ್ವಿಶತಕದಲ್ಲಿ ಬೌಂಡರಿ-ಸಿಕ್ಸರ್‌ಗಳಿಂದ ರೋಹಿತ್ ಒಟ್ಟು 144 ರನ್ ಕಲೆ ಹಾಕಿದ್ದರು.