19th September 2007: ಆರು ಎಸೆತ 6 ಸಿಕ್ಸರ್; ಯುವಿ ವಿಶ್ವ ದಾಖಲೆಗೆ 12 ವರ್ಷ!
ವಿಶ್ವಕಪ್ ಟಿ-20 ಪಂದ್ಯವೊಂದರ ಇತಿಹಾಸದಲ್ಲೇ ಮೊದಲ ಬಾರಿಗೆ ಸತತ ಆರು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆಗೆ ಅಟ್ಟಿ ಆರು ಸಿಕ್ಸ್ ಸಿಡಿಸಿದ ಯುವರಾಜ್ ಸಿಂಗ್ ಆಟದ ವೈಭವ ಯಾರಿಂದ ತಾನೆ ಮರೆಯಲು ಸಾಧ್ಯ?. ಸಿಕ್ಸರ್ ಕಿಂಗ್ ಈ ದಾಖಲೆ ಮಾಡಿ ಇಂದಿಗೆ 12 ವರ್ಷಗಳಾಗಿವೆ!


2007 ಸೆಪ್ಟೆಂಬರ್ 19ರಂದು ಭಾರತದ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್, ವಿಶ್ವಕಪ್ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ನ ಯುವ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್ನ ಸತತ ಆರು ಎಸೆತಗಳನ್ನು ಸಿಕ್ಸರ್ ಆಗಿ ಪರಿವರ್ತಿಸಿದ್ದರು


ಅಂತರಾಷ್ಟ್ರೀಯ ಕ್ರಿಕೆಟ್ ಚರಿತ್ರೆಯಲ್ಲಿ ಒಬ್ಬ ಬ್ಯಾಟ್ಸ್ಮನ್ ನಾಲ್ಕನೇ ಬಾರಿಗೆ ಸತತ ಆರು ಸಿಕ್ಸ್ ಚಚ್ಚಿದ್ದ. ಆದರೆ, ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ಸತತ ಆರು ಸಿಕ್ಸ್ ಸಿಡಿದ ದಾಖಲೆ ನಿರ್ಮಾಣ ಆಗಿತ್ತು.


ಆ ಪಂದ್ಯವನ್ನು 18 ರನ್ಗಳಿಂದ ಭಾರತ ಗೆದ್ದುಕೊಂಡಿತ್ತು. ಅದಕ್ಕೆ ಕಾರಣ ಸ್ಟುವರ್ಟ್ ಬ್ರಾಡ್ರ 18ನೇ ಓವರ್ನಲ್ಲಿ ಯುವರಾಜ್ ಗಳಿಸಿದ 38 ರನ್ಗಳು ಎನ್ನುವುದು ಇದೀಗ ಇತಿಹಾಸ.


ಫ್ಲಿಂಟಾಫ್ ಎಸೆದ 18ನೇ ಓವರಿನಲ್ಲಿ ಯುವಿ 4 ಮತ್ತು 5ನೇ ಎಸೆತದಲ್ಲಿ ಬೌಂಡರಿ ಹೊಡೆದಿದ್ದರು. ಈ ಸಂದರ್ಭ ಫ್ಲಿಂಟಾಫ್ ಯುವರಾಜ್ ಬಳಿ ಬಂದು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಯುವರಾಜ್ ಸಿಟ್ಟಾಗಿ ಅಲ್ಲೇ ಆಕ್ರೋಶ ಹೊರಹಾಕಿದರು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಮಾಡಿದ್ದರು.


19ನೇ ಓವರ್ ಎಸೆಯಲು ಬಂದಿದ್ದು ಸ್ಟುವರ್ಟ್ ಬ್ರಾಡ್. ಮೊದಲೇ ಸಿಟ್ಟಿನಲ್ಲಿದ್ದ ಯುವಿ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟಿದರು.


ನಂತರ ಎರಡನೇ ಎಸೆತವನ್ನು ಫೈನ್ ಲೆಗ್ ಮೇಲೆ ಮತ್ತೊಂದು ಸಿಕ್ಸ್ ಸಿಡಿಸಿದ್ದರು, ಮುಂದಿನ ಎಸೆತವನ್ನೂ ಸಿಕ್ಸರ್ಗೆ ಅಟ್ಟಿ ಹ್ಯಾಟ್ರಿಕ್ ಸಾಧನೆ ಮಾಡಿದರು.


5ನೇ ಎಸೆತಕ್ಕೂ ಮುನ್ನ ಬ್ರಾಡ್ ಮತ್ತು ನಾಯಕ ಕಾಲಿಂಗ್ವುಡ್ ಚರ್ಚೆ ನಡೆಸಿದರು. ಆದರೆ ಈ ಚರ್ಚೆ ಯಾವುದೇ ಫಲಕಾರಿಯಾಗಲಿಲ್ಲ. 5ನೇ ಎಸೆತವೂ ಸ್ಟೇಡಿಯಂ ಹೋಗುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಮುಖದ ಮೇಲೆ ಬೆರಳನ್ನು ಇಟ್ಟರು.


ಕೊನೆಗೆ 6ನೇ ಎಸೆತದ ಫುಲ್ಲೆಂತ್ ಬಾಲ್ ಅನ್ನು ಯುವರಾಜ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದರು