Ishan Kishan: ಏಕದಿನ ಕ್ರಿಕೆಟ್ನಲ್ಲಿ ಸಿಡಿದಿದ್ದು 9 ದ್ವಿಶತಕಗಳು, ಇದ್ರಲ್ಲಿ ಭಾರತೀಯರದ್ದೇ ಸಿಂಹಪಾಲು!
Ishan Kishan: ಟೀಂ ಇಂಡಿಯಾದ ಯುವ ಸೆನ್ಸೇಷನ್ ಇಶಾನ್ ಕಿಶನ್ ಬಾಂಗ್ಲಾದೇಶ ತಂಡದ ವಿರುದ್ಧ ಸುನಾಮಿಯಂತೆ ಸಿಡಿದಿದ್ದಾರೆ. ಇದುವರೆಗಿನ ODI ಇತಿಹಾಸದಲ್ಲಿ ಎಷ್ಟು ದ್ವಿಶತಕಗಳು ದಾಖಲಾಗಿವೆ? ಯಾವ ತಂಡದಲ್ಲಿ ಯಾರೆಲ್ಲಾ ದ್ವಿಶತಕ ಸಿಡಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ 9 ದ್ವಿಶತಕಗಳು ದಾಖಲಾಗಿವೆ. ಇದರಲ್ಲಿ ಭಾರತೀಯರೇ 6 ದ್ವಿಶತಕವನ್ನು ಸಿಡಿಸಿದ್ದಾರೆ ಎನ್ನುವುದು ವಿಶೇಷವಾಗಿದೆ.
2/ 10
ರೋಹಿತ್ ಶರ್ಮಾ: ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. 2014ರಲ್ಲಿ ಶ್ರೀಲಂಕಾ ವಿರುದ್ಧ 173 ಎಸೆತಗಳಲ್ಲಿ 264 ರನ್ ಗಳಿಸಿದ್ದರು. ಅಲ್ಲದೇ ರೋಹಿತ್ ಈವರೆಗೆ ಒಟ್ಟು 3 ಬಾರಿ ಏಕದಿನದಲ್ಲಿ ದ್ವಿಶತಕ ಸಿಡಿಸಿದ್ದಾರೆ.
3/ 10
ಮಾರ್ಟಿನ್ ಗಪ್ಟಿಲ್: ನ್ಯೂಜಿಲೆಂಡ್ ಆಟಗಾರ ಗಪ್ಟಿಲ್ 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 149 ಎಸೆತಗಳಲ್ಲಿ 237 ರನ್ ಗಳಿಸಿದ್ದರು.
4/ 10
ವೀರೇಂದ್ರ ಸೆಹ್ವಾಗ್: ಟೀಂ ಇಂಡಿಯಾ ಬ್ಯಾಟ್ಸ್ಮನ್ ಸೆಹ್ವಾಗ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 149 ಎಸೆತಗಳಲ್ಲಿ 219 ರನ್ ಗಳಿಸಿದ್ದರು.
5/ 10
ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ ನ ವಿಧ್ವಂಸಕ ಬ್ಯಾಟ್ಸ್ ಮನ್ ಗೇಲ್ 2015ರಲ್ಲಿ ಜಿಂಬಾಬ್ವೆ ವಿರುದ್ಧ 147 ಎಸೆತಗಳಲ್ಲಿ 215 ರನ್ ಗಳಿಸಿದ್ದರು.
6/ 10
ಫಖರ್ ಜಮಾನ್: ಪಾಕಿಸ್ತಾನದ ಆಟಗಾರ ಫಖರ್ ಜಮಾನ್ 2018 ರಲ್ಲಿ ಜಿಂಬಾಬ್ವೆ ವಿರುದ್ಧ 156 ಎಸೆತಗಳಲ್ಲಿ 210 ರನ್ ಗಳಿಸಿದ್ದರು.
7/ 10
ಇಶಾನ್ ಕಿಶನ್: ಟೀಂ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು.
8/ 10
ರೋಹಿತ್ ಶರ್ಮಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ 2013ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 158 ಎಸೆತಗಳಲ್ಲಿ 209 ರನ್ ಗಳಿಸಿದ್ದರು.
9/ 10
ರೋಹಿತ್ ಶರ್ಮಾ: ಹಿಟ್ಮ್ಯಾನ್ ರೋಹಿತ್ ಶರ್ಮಾ ಕೂಡ 2017ರಲ್ಲಿ ದ್ವಿಶತಕ ಬಾರಿಸಿದ್ದರು. ಅವರು ಶ್ರೀಲಂಕಾ ತಂಡದ ವಿರುದ್ಧ 153 ಎಸೆತಗಳಲ್ಲಿ 208 ರನ್ ಗಳಿಸಿದರು.
10/ 10
ಸಚಿನ್ ತೆಂಡೂಲ್ಕರ್: ಕ್ರಿಕೆಟ್ ದೇವರು ಸಚಿನ್ ಏಕದಿನದಲ್ಲಿ ಮೊದಲ ದ್ವಿಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 147 ಎಸೆತಗಳಲ್ಲಿ 200 ರನ್ ಗಳಿಸಿದ್ದರು.