ಜಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸರಣಿಯ (IND vs BAN) ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಚೇತೇಶ್ವರ ಪೂಜಾರ 203 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 90 ರನ್ ಗಳಿಸಿದರು. ಮತ್ತೆ ಪೂಜಾರ ನರ್ವಸ್ ನೈಂಟಿಯಲ್ಲಿ ಔಟಾದರು. ಇದರಿಂದಾಗಿ 1441 ದಿನಗಳಿಂದ ಕಾಡುತ್ತಿರುವ ಶತಕಗಳ ಬರಕ್ಕೆ ಇನ್ನೂ ಪೂರ್ಣವಿರಾಮ ಬಿದ್ದಿಲ್ಲ.
ಪೂಜಾರ ಟೆಸ್ಟ್ನಲ್ಲಿ ರನ್ಗಳ ವಿಷಯದಲ್ಲಿ ದಿಲೀಪ್ ವೆಂಗ್ಸರ್ಕರ್ರನ್ನು ಮೀರಿಸಿದ್ದಾರೆ. ಪೂಜಾರ ಇದುವರೆಗೆ ಟೆಸ್ಟ್ನಲ್ಲಿ 6882 ರನ್ ಗಳಿಸಿದ್ದಾರೆ. ಅವರು ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರಾಗಿ 8ನೇ ಸ್ಥಾಣಕ್ಕೆ ಜಿಗಿದಿದ್ದಾರೆ. ಪ್ರಸ್ತುತ ಭಾರತದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮಾತ್ರ ಪೂಜಾರಗಿಂತ ಮುಂದಿದ್ದಾರೆ.ವಿರಾಟ್ ಇದುವರೆಗೆ 8075 ರನ್ ಗಳಿಸಿದ್ದಾರೆ.