IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

IPL 2023: ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್​ ಪ್ಲೇಯರ್​ ಶೀಘ್ರದಲ್ಲೇ ಆಂಧ್ರಪ್ರದೇಶ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

First published:

  • 18

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯರ್​ ಅಂಬಟಿ ರಾಯುಡು ಶೀಘ್ರದಲ್ಲೇ ಆಂಧ್ರಪ್ರದೇಶ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಅವರು ಶೀಘ್ರದಲ್ಲೇ ಎಪಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

    MORE
    GALLERIES

  • 28

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ಅಂಬಟಿ ರಾಯುಡು ವೈಸಿಪಿ ಸೇರಲಿದ್ದಾರೆ ಎಂಬ ಪ್ರಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಗೊತ್ತೇ ಇದೆ. ಈ ನಡುವೆ ಸಿಎಂ ಕಚೇರಿಯಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಕಚೇರಿಯಲ್ಲಿದ್ದಾಗ ಅಂಬಟಿ ರಾಯುಡು ಅಲ್ಲಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

    MORE
    GALLERIES

  • 38

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ಕೆಲ ದಿನಗಳ ಹಿಂದೆ ರಾಯುಡು ಸಿಎಂ ಜಗನ್ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದರು. ಜಗನ್ ಭಾಷಣವನ್ನು ಶೇರ್ ಮಾಡಿದ ರಾಯುಡು, ಇದು ಅದ್ಭುತ ಭಾಷಣ ಎಂದು ಟ್ವೀಟ್ ಮಾಡಿದ್ದರು. ರಾಜ್ಯದ ಪ್ರತಿಯೊಬ್ಬರಿಗೂ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    MORE
    GALLERIES

  • 48

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ನಮ್ಮ ಮುಖ್ಯಮಂತ್ರಿ ಜಗನ್ ಅವರ ಒಂದು ಅದ್ಭುತ ಭಾಷಣ. ರಾಜ್ಯದ ಎಲ್ಲರಿಗೂ ನಿಮ್ಮ ಮೇಲೆ ನಂಬಿಕೆ ಇದೆ ಸರ್ ಟ್ವೀಟ್​ ಮಾಡಿದ್ದರು. ಇದರೊಂದಿಗೆ ರಾಯುಡು ವೈಸಿಪಿ ಸೇರುತ್ತಿದ್ದಾರೆ ಎಂಬ ಪ್ರಚಾರ ಮುನ್ನೆಲೆಗೆ ಬಂದಿದೆ.

    MORE
    GALLERIES

  • 58

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ಇನ್ನು, ಕಳೆದ ದಿನಗಳ ಹಿಂದೆ ರಾಯಡು, ನಾನು ತೆಲಂಗಾಣದಿಂದ ನಾನು ಸ್ಪರ್ಧಿಸುವುದಿಲ್ಲ ಆಂಧ್ರಪ್ರದೇಶದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ರಾಯುಡು ಅವರ ಹುಟ್ಟೂರು ಗುಂಟೂರು ಜಿಲ್ಲೆ ಆಗಿದೆ. ಕಾಪು ಸಮುದಾಯಕ್ಕೆ ಸೇರಿದ ಅಂಬಟಿ ರಾಯುಡು ಅವರ ತಾತ ಗ್ರಾಮದ ಸರಪಂಚರಾಗಿ ಕೆಲಸ ಮಾಡುತ್ತಿದ್ದರು.

    MORE
    GALLERIES

  • 68

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ಅಂಬಟಿ ರಾಯುಡು ಟ್ವೀಟ್ ಮತ್ತು ಜಗನ್ ಭೇಟಿಯಾಗಿರುವುದು ಆಂಧ್ರ ರಾಜಕೀಯದಲ್ಲಿ ಸಖತ್​ ಹಾಟ್ ಟಾಪಿಕ್ ಆಗಿದೆ. ಇದರೊಂದಿಗೆ ಅಂಬಟಿ ರಾಯುಡು ವೈಸಿಪಿಗೆ ಬೆಂಬಲ ನೀಡುತ್ತಿರುವಂತೆ ಕಾಣುತ್ತಿದೆ. ಶೀಘ್ರದಲ್ಲೇ ವೈಸಿಪಿ ಪಕ್ಷ ಸೇರುವ ಸಾಧ್ಯತೆ ಇದೆ.

    MORE
    GALLERIES

  • 78

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    37 ವರ್ಷದ ಅಂಬಟಿ ರಾಯುಡು ಈ ವರ್ಷ ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಎಪಿಯಲ್ಲಿ 2024ರಲ್ಲಿ ಚುನಾವಣೆ ನಡೆಯಲಿದೆ. ಈ ಕ್ರಮದಲ್ಲಿ ಅವರು ನಡೆಯುತ್ತಿರುವ ಐಪಿಎಲ್ ನಂತರ ರಾಜಕೀಯ ಹೇಳಿಕೆ ನೀಡುವ ಸಾಧ್ಯತೆ ಇದೆ.

    MORE
    GALLERIES

  • 88

    IPL 2023: ಆಂಧ್ರ ಪಾಲಿಟಿಕ್ಸ್‌ ಸೇರ್ತಿದ್ದಾರಾ ಚೆನ್ನೈ ಟೀಂ ಸ್ಟಾರ್ ಪ್ಲೇಯರ್? ಜಗನ್ ಪಕ್ಷಕ್ಕೆ ಸೇರೋ ಬಗ್ಗೆ ಚರ್ಚೆ!

    ಆದರೆ ರಾಯಡು ಕೆಲ ದಿನಗಳ ಹಿಂದೆ ಟಿಡಿಪಿ ಸೇರುವ ಸಾಧ್ಯತೆ ಇದೆ ಎಂದು ಸುದ್ದಿ ಹರಿದಾಡಿತ್ತು. ಆದರೆ, ಈಗ ಜಗನ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಅವರು ಆಂಧ್ರ ರಾಜಕೀಯಕ್ಕೆ ಎಂಟ್ರಿ ಕೊಡುವ ಸಾಧ್ಯತೆ ನಿಚ್ಚಳವಾಗಿದೆ.

    MORE
    GALLERIES