IPL 2023 Mini Auction: ಐಪಿಎಲ್ಗೆ ಎಂಟ್ರಿ ಕೊಡಲಿದ್ದಾರೆ ಟಿ20 ಸ್ಪೆಷಲಿಸ್ಟ್, ಈ ಆಟಗಾರನ ಖರೀದಿಗೆ ನಡೆಯಲಿದೆ ಬಿಗ್ ಫೈಟ್
IPL 2023 Mini Auction: ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಈ ಬಾರಿ ಹರಾಜಿನಲ್ಲಿ ಆಸೀಸ್ನ ಟಿ20 ಕ್ರಿಕೆಟ್ನ ಅದ್ಭುತ ಆಟಗಾರನ ಮೇಲೆ ಎಲ್ಲಾ ಪ್ರಾಂಚೈಸಿಗಳ ಕಣ್ಣು ಇದೀಗ ನೆಟ್ಟಿದೆ.
ಒಂದೆಡೆ ಟೀಂ ಇಂಡಿಯಾ ಸರಣಿಗಳ ಮೇಲೆ ಸರಣಿ ಆಡುತ್ತಿದೆ. ಮತ್ತೊಂದೆಡೆ, ಬಿಸಿಸಿಐ ಮುಂಬರುವ ಐಪಿಎಲ್ 2023 ಮಿನಿ ಹರಾಜಿಗಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದೆ.
2/ 8
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಮಿನಿ ಹರಾಜು ನಡೆಯಲಿದೆ. ಈಗಾಗಲೇ ಅನೇಕ ಆಟಗಾರರು ಈ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.
3/ 8
ಆಸ್ಟ್ರೇಲಿಯಾದಲ್ಲಿ ಕೊನೆಗೊಂಡ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿದ್ದು ಗೊತ್ತೇ ಇದೆ. ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಯಾಮ್ ಕರನ್ ಜೊತೆಗೆ ಬೆನ್ ಸ್ಟೋಕ್ಸ್ ಕೂಡ ಹರಾಜಿನಲ್ಲಿ ಭಾರಿ ಬೆಲೆ ಪಡೆಯುವ ಸಾಧ್ಯತೆಯಿದೆ.
4/ 8
ಇದರ ಜೊತೆಗೆ ಇತ್ತೀಚೆಗೆ ಆಸ್ಟ್ರೇಲಿಯಾದ ಪವರ್ ಹಿಟ್ಟರ್ ಕ್ಯಾಮರೂನ್ ಗ್ರೀನ್ ಕೂಡ ಐಪಿಎಲ್ ಮಿನಿ ಹರಾಜಿಗೆ ಬರಲಿದ್ದಾರೆ. ಇದಕ್ಕಾಗಿ ಹರಾಜಿನಲ್ಲಿ ಹೆಸರು ನೋಂದಾಯಿಸಿರುವುದಾಗಿ ತಿಳಿಸಿದ್ದಾರೆ.
5/ 8
ಸದ್ಯ ಗ್ರೀನ್ ಟಿ20 ಮಾದರಿಯಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ. ಟಿ20 ವಿಶ್ವಕಪ್ ಗೂ ಮುನ್ನ ಭಾರತದಲ್ಲಿ ನಡೆದ ಟಿ20 ಸರಣಿಯಲ್ಲಿ ಗ್ರೀನ್ ಅದ್ಭುತ ಪ್ರದರ್ಶನ ನೀಡಿದ್ದರು.
6/ 8
ಹೈದರಾಬಾದ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಗ್ರೀನ್ ಬೌಲ್ ಮಾಡುವ ಸಾಮರ್ಥ್ಯವನ್ನೂ ಹೊಂದಿದ್ದಾರೆ. ಗ್ರೀನ್ ಅವರು ನಿರ್ಣಾಯಕ ಸಮಯದಲ್ಲಿ ಬೌಲ್ ಮಾಡುವ ಮತ್ತು ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರ.
7/ 8
ಗ್ರೀನ್ ಇದೀಗ ಹರಾಜಿಗೆ ಬರುತ್ತಿರುವುದರಿಂದ ಫ್ರಾಂಚೈಸಿಗಳು ಅವರಿಗಾಗಿ ಭರ್ಜರಿ ಫೈಟ್ ನಡೆಸುವ ಸಾಧ್ಯತೆ ಇದೆ. ಸನ್ರೈಸರ್ಸ್, ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ನಂತಹ ತಂಡಗಳು ಗ್ರೀನ್ಗಾಗಿ ಪೈಪೋಟಿ ನಡೆಸುವ ಸಾಧ್ಯತೆಯಿದೆ.
8/ 8
ಐಪಿಎಲ್ ನಲ್ಲಿ ಆಡಲು ಆಸಕ್ತಿ ಇದೆ ಎಂದು ಗ್ರೀನ್ ಹೇಳಿದ್ದಾರೆ. ಐಪಿಎಲ್ ಮೂಲಕ ಭಾರತದ ಪಿಚ್ ಗಳಲ್ಲೂ ಅನುಭವ ಪಡೆಯಲಿರುವೆ ಎಂದು ಹೇಳಿದ್ದಾರೆ.