ಇದೇ ತಿಂಗಳ 9ರಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಸರಣಿಯನ್ನು ಗೆಲ್ಲುವುದರ ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕು. ಹೀಗಾದರೆ ಹಿಟ್ಮ್ಯಾನ್ ಇನ್ನೂ ಕೆಲವು ದಿನಗಳ ಕಾಲ ಟೆಸ್ಟ್ ನಾಯಕನಾಗಿ ಮುಂದುವರಿಯುತ್ತಾರೆ ಇಲ್ಲವಾದಲ್ಲಿ ಅವರ ಜಾಗಕ್ಕೆ ಕೆಎಲ್ ರಾಹುಲ್ ಅಥವಾ ಬೇರೆಯವರು ಬರಬಹುದು. ಬಿಸಿಸಿಐ ಈಗಾಗಲೇ ಈ ವಿಷಯವನ್ನು ರೋಹಿತ್ ಅವರ ಗಮನಕ್ಕೆ ತಂದಿದೆಯಂತೆ.