Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

Virat Kohli: ಮೊದಲ ಟೆಸ್ಟ್ ಪಂದ್ಯ ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಫೆಬ್ರವರಿ 9ರಂದು ಆರಂಭವಾಗಲಿದೆ. ಈ ಸರಣಿಯಲ್ಲಿ ಕೊಹ್ಲಿ ಅವರು ಸತತ ಮೂರು ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ.

First published:

  • 18

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಇದೇ ತಿಂಗಳ 9ರಿಂದ ಭಾರತದಲ್ಲಿ 4 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭವಾಗಲಿದೆ. ಒಟ್ಟಾರೆಯಾಗಿ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.

    MORE
    GALLERIES

  • 28

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಮೊದಲ ಟೆಸ್ಟ್ ಪಂದ್ಯವು ಗುರುವಾರ, ಫೆಬ್ರವರಿ 9 ರಂದು ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಬಹುದು. ಈ ಸರಣಿಯಲ್ಲಿ ಕೊಹ್ಲಿ ಅವರು ಸತತ ಮೂರು ದಾಖಲೆಗಳನ್ನು ಮುರಿಯಬಹುದಾಗಿದೆ.

    MORE
    GALLERIES

  • 38

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ವಿರಾಟ್ ಕೊಹ್ಲಿ ಎಲ್ಲಾ ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ವೇಗವಾಗಿ 25,000 ರನ್ ಗಳಿಸಿದ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ. ಅವರು 546 ಇನ್ನಿಂಗ್ಸ್‌ಗಳಲ್ಲಿ ಒಟ್ಟು 24,936 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.

    MORE
    GALLERIES

  • 48

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಟೆಸ್ಟ್‌ನಲ್ಲಿ 8,119 ರನ್, ಏಕದಿನದಲ್ಲಿ 12,809 ರನ್ ಮತ್ತು ಟಿ20ಯಲ್ಲಿ 4,008 ರನ್ ಸೇರಿವೆ. ಈ ಸರಣಿಯಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ವೇಗವಾಗಿ 25,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ. ಸದ್ಯ ಈ ದಾಖಲೆ ಸಚಿನ್ ಹೆಸರಿನಲ್ಲಿದೆ. ಅವರು 576 ಇನ್ನಿಂಗ್ಸ್‌ಗಳಲ್ಲಿ 25000 ರನ್ ಗಳಿಸಿದ್ದರು.

    MORE
    GALLERIES

  • 58

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಗೆ ಹತ್ತಿರವಾಗಿದ್ದಾರೆ. ಭಾರತ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಪ್ರಸ್ತುತ ಆರನೇ ಸ್ಥಾನದಲ್ಲಿದ್ದಾರೆ. ಇದುವರೆಗೆ ಅವರು ಸುಮಾರು 49ರ ಸರಾಸರಿಯಲ್ಲಿ 8,119 ರನ್ ಗಳಿಸಿದ್ದಾರೆ.

    MORE
    GALLERIES

  • 68

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಪ್ರಸಕ್ತ ಸರಣಿಯಲ್ಲಿ ಅವರು 4 ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ 391 ರನ್ ಗಳಿಸಿದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದವರ ಸಾರ್ವಕಾಲಿಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ವೀರೇಂದ್ರ ಸೆಹ್ವಾಗ್ (8,503) ಅವರನ್ನು ಹಿಂದಿಕ್ಕಬಹುದಾಗಿದೆ.

    MORE
    GALLERIES

  • 78

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಕೊಹ್ಲಿ ಕೊನೆಯದಾಗಿ 2018ರಲ್ಲಿ ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 123 ರನ್ ಗಳಿಸಿದ್ದರು. ಅಂದಿನಿಂದ ಅವರು ಆಸೀಸ್ ವಿರುದ್ಧ ಟೆಸ್ಟ್‌ನಲ್ಲಿ ಶತಕ ಬಾರಿಸಿಲ್ಲ. ಈ ಸರಣಿಯಲ್ಲಿ ಕೊಹ್ಲಿ ತಮ್ಮ ಸಾಮರ್ಥ್ಯ ತೋರುವ ಸಾಧ್ಯತೆಗಳಿವೆ. ಈ ಸರಣಿಯಲ್ಲಿ ಕೊಹ್ಲಿ ಕನಿಷ್ಠ 2 ಶತಕ ಬಾರಿಸಿದರೆ, ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

    MORE
    GALLERIES

  • 88

    Virat Kohli: ಆಸೀಸ್​ ವಿರುದ್ಧ ವಿರಾಟ್ ಶತಕದ ಬರ ಕೊನೆಗೊಳ್ಳುತ್ತಾ? ಸಚಿನ್ ದಾಖಲೆ ಮೇಲೆ ಕಿಂಗ್​ ಕೊಹ್ಲಿ ಕಣ್ಣು!

    ಆಸ್ಟ್ರೇಲಿಯ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ ಪ್ರಸ್ತುತ ಆಸೀಸ್ ವಿರುದ್ಧ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7 ಶತಕಗಳನ್ನು ಸಿಡಿಸಿದ್ದಾರೆ. ಗವಾಸ್ಕರ್ 20 ಪಂದ್ಯಗಳಲ್ಲಿ 8 ಶತಕಗಳನ್ನು ಗಳಿಸಿದ್ದಾರೆ.

    MORE
    GALLERIES