IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

Ben Stokes: ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಬೆನ್​ ಸ್ಟೋಕ್ಸ್ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಪಾಲಾಗಿದ್ದಾರೆ. ಅವರನ್ನು ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯನ್ನಾಗಿ ಮಾಡಲು ಚೆನ್ನೈ ಫ್ರಾಂಚೈಸಿ ಯೋಚಿಸುತ್ತಿದೆ.

First published:

 • 18

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಐಪಿಎಲ್​ 2023 ಆರಂಭಕ್ಕೆ ಇನ್ನೇನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ತಮ್ಮ ಅಂತಿಮ ತಂಡದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಆದರೆ ಪ್ರಮುಖ ತಂಡಗಳ ಸ್ಟಾರ್​ ಆಟಗಾರರು ತಂಡದಿಂದ ಹೊರಗುಳಿಯುತ್ತಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ.

  MORE
  GALLERIES

 • 28

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಹೌದು, ಐಪಿಎಲ್​ನ ಯಶಸ್ವಿ ತಂಡಗಳಲ್ಲಿ ಒಂದಾದ 4 ಬಾರಿಯ ಚಾಂಪಿಯನ್​ ತಂಡ ಚೆನ್ನೈ ಸೂಪರ್​ ಕಿಂಗ್ಸ್ ತಂಡಕ್ಕೆ ಟೂರ್ನಿ ಆರಂಭಕ್ಕೂ ಮುನ್ನವೇ ದೊಡ್ಡ ಹಿನ್ನಡೆ ಆಗಿದೆ. ಬರೋಬ್ಬರಿ 16 ಕೋಟಿ ನೀಡಿ ಖರೀದಿಸಿದ ಇಂಗ್ಲೆಂಡ್​ ಟೆಸ್ಟ್ ನಾಯಕ ಹೊಸ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

  MORE
  GALLERIES

 • 38

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಇಂಗ್ಲೆಂಡ್​ ಟೆಸ್ಟ್​ ನಾಯಕ ಬೆನ್​ ಸ್ಟೋಕ್ಸ್ ಮುಂಬರುವ ಆ್ಯಶಸ್​ ಸರಣಿ ಮತ್ತು ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡದ ಏಕೈಕ ಟೆಸ್ಟ್ ಪಂದ್ಯದ ಕಾರಣ ಐಪಿಎಲ್‌ನ ಸಂಪೂರ್ಣ ಋತುವಿನಲ್ಲಿ ಲಭ್ಯವಿರುವುದಿಲ್ಲ ಎಂದು ಹೇಳಲಾಗುತ್ತಿದೆ.

  MORE
  GALLERIES

 • 48

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಇಂಗ್ಲೆಂಡ್ ತಂಡದ ಪೂರ್ವ ನಿರ್ಧರಿತ ವೇಳಾಪಟ್ಟಿಯ ಪ್ರಕಾರ, ಜೂನ್ 1 ರಿಂದ, ಇಂಗ್ಲೆಂಡ್​ ತಂಡವು ಐರ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ಆಡಬೇಕಾಗಿದೆ. ಇದಕ್ಕೂ ನಾಲ್ಕು ದಿನಗಳ ಮೊದಲು ಅಂದರೆ ಮೇ 28 ರಂದು ಐಪಿಎಲ್ 2023 ರ ಫೈನಲ್ ಪಂದ್ಯ ನಡೆಯಲಿದೆ.

  MORE
  GALLERIES

 • 58

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ತಲುಪಬಹುದೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. BCC ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಅವರು ಅಂತಿಮ ಪಂದ್ಯಗಳಲ್ಲಿ ಲಭ್ಯವಿರುವುದಿಲ್ಲ ಎಂದು ಈಗಾಗಲೇ ತಮ್ಮ ಫ್ರಾಂಚೈಸಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

  MORE
  GALLERIES

 • 68

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಇಂಗ್ಲೆಂಡ್ ತನ್ನ ತವರಿನಲ್ಲಿ ಜೂನ್ 16 ರಿಂದ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್​ ಸರಣಿಯನ್ನು ಆಡಲಿದೆ.

  MORE
  GALLERIES

 • 78

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಕಾರಣಾಂತರಗಳಿಂದ ಸ್ಟೋಕ್ಸ್ ಕಳೆದ ಐಪಿಎಲ್ ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ರೂ.ಗೆ ಅವರನ್ನು ಖರೀದಿಸಿತ್ತು.

  MORE
  GALLERIES

 • 88

  IPL 2023: CSK ತಂಡದಿಂದ ಹೊರನಡೆದ ಸ್ಟಾರ್​ ಪ್ಲೇಯರ್​! ಚೆನ್ನೈಗೆ ಕೈಕೊಟ್ಟ ಕೋಟಿ ವೀರ

  ಚೆನ್ನೈ ಸೂಪರ್ ಕಿಂಗ್ಸ್ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹ್ಯಾಂಗರ್‌ಗೆಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಹರ್ಡೇಜಾ, ರವೀಂದ್ರ ಜಹರ್ಡೇಜಾ ದೇಶಪಾಂಡೆ, ಮುಖೇಶ್ ಚೌಧರಿ, ಮತಿಶಾ ಪತಿರಾನ, ಸಿಮರ್‌ಜಿತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕಷ್ಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.

  MORE
  GALLERIES