ಇನ್ನು, ಗಂಗೂಲಿ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರು. 2003ರ ವಿಶ್ವಕಪ್‌ನಲ್ಲಿ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಗಂಗೂಲಿ ಭಾರತದ ಪರ 113 ಟೆಸ್ಟ್‌ಗಳಲ್ಲಿ 7212 ರನ್ ಮತ್ತು 311 ಏಕದಿನ ಪಂದ್ಯಗಳಲ್ಲಿ 11363 ರನ್ ಗಳಿಸಿದ್ದಾರೆ. ಅವರ ನಿವೃತ್ತಿಯ ನಂತರ, ಗಂಗೂಲಿ ಕೆಲವು ವರ್ಷಗಳ ಕಾಲ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ.