ವರ್ಷದ ಹಿಂದೆ ಫೆಬ್ರವರಿಯಲ್ಲಿ ಉದ್ಘಾಟನೆಗೊಂಡ ಅಹಮದಾಬಾದ್ನ ಹಳೆಯ ಮೊಟೆರಾ ಕ್ರೀಡಾಂಗಣವನ್ನು ಕೆಡವಿ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗಿದೆ. ಉದ್ಘಾಟನೆಯ ನಂತರವೇ ಇದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಯಿತು. ಇದೀಗ ಅದರ ಹೆಸರಲ್ಲಿ ಮತ್ತೊಂದು ದಾಖಲೆ ದಾಖಲಾಗಿದೆ. ಬಿಸಿಸಿಐ ಭಾನುವಾರ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದೆ. ಇದೀಗ ಟಿ20ಯಲ್ಲಿ ಅತಿ ಹೆಚ್ಚು ಪ್ರೇಕ್ಷಕರು ಭೇಟಿ ನೀಡಿದ ವಿಶ್ವದಾಖಲೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಹೆಸರಿನಲ್ಲಿ ದಾಖಲಾಗಿದೆ. ಇದು ಈ ವರ್ಷದ ಐಪಿಎಲ್ ಫೈನಲ್ನಲ್ಲಿ ನಡೆದಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ‘ಒಂದೇ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಪ್ರೇಕ್ಷಕರು ಭೇಟಿ ನೀಡಿದ ನರೇಂದ್ರ ಮೋದಿ ಸ್ಟೇಡಿಯಂ ಗಿನ್ನಿಸ್ ಬುಕ್ ದಾಖಲೆಗೆ ಸೇರ್ಪಡೆಗೊಂಡಿರುವುದಕ್ಕೆ ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದು ಬರೆದಿದ್ದಾರೆ. 29 ಮೇ 2022 ರಂದು ನಡೆದ ಐಪಿಎಲ್ ಫೈನಲ್ನಲ್ಲಿ 1,01,566 ಪ್ರೇಕ್ಷಕರು ಈ ಕ್ರೀಡಾಂಗಣದಲ್ಲಿ ಹಾಜರಿದ್ದರು. ಇದನ್ನು ಸಾಧ್ಯವಾಗಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು ಎಂದು ಜಯ್ ಶಾ ತಿಳಿಸಿದ್ದಾರೆ.