ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

ಮುಲ್ತಾನ್‌ನಲ್ಲಿ ಇರ್ಫಾನ್ ಪಠಾಣ್ ಅವರ ಹ್ಯಾಟ್ರಿಕ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಟ್ರಿಪಲ್ ಸೆಂಚುರಿ ಸೇರಿದಂತೆ ಹಲವು ದಾಖಲೆಗಳು ಮೂಡಿಬಂದಿದ್ದವು.

First published:

  • 111

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಅದು 2004. ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತ ಪಾಕ್ ನೆಲದಲ್ಲಿ ಸರಣಿಯನ್ನಾಡಲು ತೆರಳಿತ್ತು. ಸೌರವ್ ಗಂಗೂಲಿ ನೇತೃತ್ವದ ಟೀಮ್​ ಇಂಡಿಯಾ ಅನುಭವಿ-ಯುವ ಪಡೆಗಳ ಸಮ್ಮಿಲನದಿಂದ ಕೂಡಿತ್ತು.

    MORE
    GALLERIES

  • 211

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಇದೇ ವೇಳೆ ತಂಡದಲ್ಲಿದ್ದ ಯುವ ವೇಗಿ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗ ಹಾಗೂ ಈಗಿನ ಪ್ರಧಾನಿ ಇಮ್ರಾನ್ ಖಾನ್​ಗಿಂತಲೂ ಪಾಕ್​ ನೆಲದಲ್ಲಿ ಪ್ರಸಿದ್ದಿ ಪಡೆದಿದ್ದನು ಎಂದು ಭಾರತ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ.

    MORE
    GALLERIES

  • 311

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಪಾಕ್​ ನೆಲದಲ್ಲಿಯೇ ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಗೆದ್ದು ಬೀಗಿದ ಭಾರತಕ್ಕೆ ಅದು ಅವಿಸ್ಮರಣೀಯ ಕ್ಷಣವಾಗಿತ್ತು. ಈ ಸರಣಿ ಟೀಮ್ ಇಂಡಿಯಾ ಅನೇಕ ಆಟಗಾರರ ಪಾಲಿಗೆ ನೆನಪಿನ ಬುತ್ತಿ ಎನ್ನಬಹುದು.

    MORE
    GALLERIES

  • 411

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಮುಲ್ತಾನ್‌ನಲ್ಲಿ ಇರ್ಫಾನ್ ಪಠಾಣ್ ಅವರ ಹ್ಯಾಟ್ರಿಕ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಟ್ರಿಪಲ್ ಸೆಂಚುರಿ ಸೇರಿದಂತೆ ಹಲವು ದಾಖಲೆಗಳು ಮೂಡಿಬಂದಿದ್ದವು. ಅದರೊಂದಿಗೆ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದು ಲಕ್ಷ್ಮೀಪತಿ ಬಾಲಾಜಿ.

    MORE
    GALLERIES

  • 511

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ವಿಶ್ವದ ಅತ್ಯಂತ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದು, ಬ್ಯಾಟಿಂಗ್ ಮಾಡುವಾಗ ತನ್ನ ಬ್ಯಾಟ್ ಅನ್ನು ಮುರಿಯುವುದು, ಹಾಗೆಯೇ ಪ್ರತಿ ಪಂದ್ಯದಲ್ಲೂ ಅದ್ಭುತ ಬೌಲಿಂಗ್ ಮಾಡಿರುವುದು. ಆ ನಗು ಮುಖ ಎಲ್ಲವೂ ಬಾಲಾಜಿಯನ್ನು ಪಾಕ್​ ನೆಲದಲ್ಲಿ ಜನಪ್ರಿಯರನ್ನಾಗಿಸಿತು.

    MORE
    GALLERIES

  • 611

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಈ ಸರಣಿಯಲ್ಲಿ ಬಾಲಾಜಿ ಮೂರು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ್ದರು. ಅದರಲ್ಲೂ ರಾವಲ್ಪಿಂಡಿಯಲ್ಲಿ ನಡೆದ ನಿರ್ಣಾಯಕ ಟೆಸ್ಟ್‌ನಲ್ಲಿ ಬಾಲಾಜಿ ಪಾಕಿಸ್ತಾನದ 7 ವಿಕೆಟ್ ಕಬಳಿಸಿ ಭಾರತ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದರು ಎಂದಿದ್ದಾರೆ ಆಶಿಶ್ ನೆಹ್ರಾ.

    MORE
    GALLERIES

  • 711

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಏಕದಿನ ಸರಣಿಯಲ್ಲಿ ಹೆಚ್ಚಾಗಿ 10 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಬಾಲಾಜಿ ಅವರ ಅಂದಿನ ಸ್ಟ್ರೈಕ್ ರೇಟ್ 160.71. ಅದರಲ್ಲೂ ಕೆಳ ಕ್ರಮಾಂಕದಲ್ಲಿ 36 ಎಸೆತಗಳಲ್ಲಿ ಬಾಲಾಜಿ 45 ರನ್ ಬಾರಿಸಿದ್ದರು.

    MORE
    GALLERIES

  • 811

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಇದರಲ್ಲಿ ಬಾಲಾಜಿ 6 ಬೌಂಡರಿಗಳನ್ನು ಬಾರಿಸಿದ್ದರೆ, ಅಖ್ತರ್ ಹಾಗೂ ಸಮಿ ಎಸೆತಗಳಲ್ಲಿ ಎರಡು ಸಿಕ್ಸ್ ಸಿಡಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಅವರ ಈ ಆಟ ಇಡೀ ಪಾಕಿಸ್ತಾನದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿತು.

    MORE
    GALLERIES

  • 911

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಎಷ್ಟರ ಮಟ್ಟಿಗೆ ಅಂದರೆ ಪಾಕ್ ಲೆಜೆಂಡ್ ಆಟಗಾರ ಇಮ್ರಾನ್ ಖಾನ್ ಅವರಿಗಿಂತಲೂ ಲಕ್ಷ್ಮೀಪತಿ ಬಾಲಾಜಿ ಪಾಕಿಸ್ತಾನದಲ್ಲಿ ಖ್ಯಾತಿ ಪಡೆಯುವಂತೆ ಮಾಡಿತ್ತು ಎಂದು ಆಶಿಶ್ ನೆಹ್ರಾ ಹೇಳಿದರು.

    MORE
    GALLERIES

  • 1011

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಟೀಮ್ ಇಂಡಿಯಾ ಪರ 8 ಟೆಸ್ಟ್ ಪಂದ್ಯವನ್ನಾಡಿದ ಬಾಲಾಜಿ 27 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 30 ಏಕದಿನ ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದಾರೆ.

    MORE
    GALLERIES

  • 1111

    ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗಿಂತ ಪಾಕ್​ ನೆಲದಲ್ಲಿ ಟೀಮ್ ಇಂಡಿಯಾದ ಈ ಬೌಲರ್ ಹೆಚ್ಚು ಖ್ಯಾತಿಗಳಿಸಿದ್ದ..!

    ಬಾಲಾಜಿ 5 ಟಿ20 ಪಂದ್ಯಗಳನ್ನು ಸಹ ಆಡಿದ್ದು ಇದರಲ್ಲಿ 10 ವಿಕೆಟ್ ಪಡೆದು ಮಿಂಚಿದ್ದಾರೆ.

    MORE
    GALLERIES