ಟೋಕಿಯೋ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ವಿತೀಯ ಸಾಧನೆ ಮಾಡಿದ್ಧಾರೆ. ಪದಕ ಗೆದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಸಂವಾದ ನಡೆಸಿದರು. ಈ ವೇಳ, ಕೆಲ ಕ್ರೀಡಾಪಟುಗಳು ಪ್ರಧಾನಿಗೆ ಗಿಫ್ಟ್ಗಳನ್ನ ನೀಡಿದರು. ಪ್ರಧಾನಿ ಆದ ಬಳಿಕ ತಮಗೆ ಬಂದ ಉಡುಗೊರೆಗಳನ್ನ ಹರಾಜಿಗೆ ಇಟ್ಟು ಅದರಿಂದ ಬರುವ ಹಣವನ್ನು ಪಿಎಂ ಕೇರ್ ಫಂಡ್ಗೆ ಬಳಸುವ ಸಂಪ್ರದಾಯವನ್ನು ಮೋದಿ ಬೆಳೆಸಿಕೊಂಡಿದ್ದಾರೆ. ಅದರಂತೆ ಒಲಿಂಪಿಕ್ಸ್ ಸ್ಟಾರ್ಗಳು ಕೊಟ್ಟ ಉಡುಗೊರೆಯೂ ಹರಾಜಿಗೆ ಇಡಲಾಗಿದೆ. ಅಕ್ಟೋಬರ್ 7ರವರೆಗೂ ಈ ವಿಶೇಷ ವಸ್ತುಗಳಿಗೆ ಬಿಡ್ಡಿಂಗ್ ಚಾಲನೆಯಲ್ಲಿರುತ್ತದೆ. ಯಾವ್ಯಾವ ವಸ್ತುಗಳಿಗೆ ಸದ್ಯ ಎಷ್ಟು ಬಿಡ್ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.
Boxing Gloves- ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದ ಲವ್ಲಿನಾ ಬೋರ್ಗೋಹೇನ್ ಅವರು ತಮ್ಮ ಬಾಕ್ಸಿಂಗ್ ಗ್ಲೋವ್ಗಳನ್ನ ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದರು. ಇದೇ ಗ್ಲೌಸ್ ಬಳಸಿ ಅವರು ಒಲಿಂಪಿಕ್ಸ್ನಲ್ಲಿ ಸೆಣಸಿದ್ದರು. ಈ ಗ್ಲೌಸ್ನಲ್ಲಿ ಅವರ ಸಹಿಯೂ ಇದೆ. ಹರಾಜಿನಲ್ಲಿ ಈ ಗ್ಲೌಸ್ಗೆ ಮೂಲಬೆಲೆಯಾಗಿ 80 ಲಕ್ಷ ಇಡಲಾಗಿದೆ. ಸದ್ಯ ಇದಕ್ಕೆ 1.92 ಕೋಟಿ ರೂಗೆ ಗರಿಷ್ಠ ಬಿಡ್ಡಿಂಗ್ ಆಗಿದೆ.
Women’s hockey stick- ಟೋಕಿಯೋ ಒಲಿಂಪಿಕ್ಸ್ನಲ್ಲ ಭಾರತದ ಮಹಿಳಾ ಹಾಕಿ ತಂಡ ಕೆಚ್ಚೆದೆಯ ಪ್ರದರ್ಶನ ತೋರಿ ನಾಲ್ಕನೇ ಸ್ಥಾನ ಪಡೆದಿತ್ತು. ಸ್ವಲ್ಪದರಲ್ಲೇ ಕಂಚಿನ ಪದಕ ಮಿಸ್ ಆಗಿತ್ತು. ಇದೀಗ ಇಡೀ ಹಾಕಿ ತಂಡದ ಆಟಗಾರ್ತಿಯರು ಸಹಿ ಹಾಕಿದ ಹಾಕಿ ಸ್ಟಿಕ್ವೊಂದನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಕ್ಷಕ್ ಬ್ರ್ಯಾಂಡ್ನ ಈ ಹಾಕಿ ಸ್ಟಿಕ್ನ ಮಾಡೆಲ್ ಹೆಸರು ರಾಣಿ 28 ಎಂದಿದೆ. ರಾಣಿ ಎಂದರೆ ಇಲ್ಲಿ ಟೀಮ್ ಇಂಡಿಯಾ ನಾಯಕಿ ರಾಣಿ ರಾಮಪಾಲ್ ಅವರ ಹೆಸರಾಗಿದೆ. ಈ ಅಮೂಲ್ಯವಾದ ಹಾಕಿ ಸ್ಟಿಕ್ ಅನ್ನು ಹರಾಜಿನಲ್ಲಿ ಮೂಲಬೆಲೆಯಾಗಿ 80 ಲಕ್ಷ ರೂ ನಿಗದಿ ಮಾಡಲಾಗಿದೆ. ಈಗಾಗಲೇ ಅದಕ್ಕೆ 1 ಕೋಟಿಗೆ ಬಿಡ್ ಆಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.