ಕೆಎಲ್ ರಾಹುಲ್ ನಾಳೆ ಅಥಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅದರೆ ರಾಹುಲ್ ಮದುವೆಗೂ ಮುನ್ನ ನಿಧಿ ಅಗರ್ವಾಲ್ ಜೊತೆ ಸಾಕಷ್ಟು ಸಮಯ ಕಳೆದಿದ್ದಾರೆ. ಮುಂಬೈನ ಕೆಫೆಯೊಂದರಲ್ಲಿ ನಿಧಿ ಮತ್ತು ರಾಹುಲ್ ಒಟ್ಟಿಗೆ ಕಾಣಿಸಿಕೊಂಡಿರುವ ಚಿತ್ರವನ್ನು Instagram ನಲ್ಲಿ ಹಂಚಿಕೊಂಡ ಬಳಿಕ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ನಂತರ, ತಮ್ಮ ಕಾಲೇಜು ದಿನಗಳಿಂದಲೂ ಒಬ್ಬರಿಗೊಬ್ಬರು ತಿಳಿದಿರುವ ಕಾರಣ ಕೆಎಲ್ ರಾಹುಲ್ ಅವರೊಂದಿಗೆ ಡಿನ್ನರ್ಗೆ ಹೋಗಿದ್ದೆ ಎಂದು ನಟಿ ಕೂಡ ಒಪ್ಪಿಕೊಂಡಿದ್ದರು.
ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ ಸೋನಾಲ್ ಚೌಹಾನ್ ಅವರ ಹೆಸರೂ ಕೆಎಲ್ ರಾಹುಲ್ ಜೊತೆ ಕೇಳಿಬಂದಿತ್ತು. 2018 ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ, ನಟಿ ಟ್ವೀಟ್ ಮಾಡಿದ್ದರು, 'ಕೆಎಲ್ ರಾಹುಲ್ ಆಡುವುದನ್ನು ನೋಡಲು ಸಂತೋಷವಾಗಿದೆ. ಅವರು ತುಂಬಾ ಪ್ರತಿಭಾವಂತರು ಎಂದು ಬರೆದುಕೊಂಡಿದ್ದರು. ಆದಾಗ್ಯೂ, ನಂತರ ಸೋನಾಲ್ ಸ್ವತಃ ಕೆಎಲ್ ರಾಹುಲ್ ಡೇಟಿಂಗ್ ಅನ್ನು ನಿರಾಕರಿಸಿದ್ದರು.