ICC Awards 2022: ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ರೇಸ್ನಲ್ಲಿ ಟೀಂ ಇಂಡಿಯಾ ಪ್ಲೇಯರ್, ತಂಡದಲ್ಲಿ ಈಗ ಇವರದ್ದೇ ಹವಾ!
ICC Awards 2022: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) 2022 ರ ಉದಯೋನ್ಮುಖ ಕ್ರಿಕೆಟ್ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಾಲ್ವರು ಯುವ ಕ್ರಿಕೆಟಿಗರಿದ್ದಾರೆ. ಟೀಂ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಆಯ್ಕೆ ಆಗಿದ್ದಾರೆ.
ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) 2022 ರ ಉದಯೋನ್ಮುಖ ಕ್ರಿಕೆಟ್ ಪ್ರಶಸ್ತಿಗೆ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ನಾಲ್ವರು ಯುವ ಕ್ರಿಕೆಟಿಗರಿದ್ದಾರೆ. ಟೀಂ ಇಂಡಿಯಾದ ಯುವ ವೇಗಿ ಅರ್ಷದೀಪ್ ಸಿಂಗ್ ಆಯ್ಕೆ ಆಗಿದ್ದಾರೆ.
2/ 8
ಅರ್ಷದೀಪ್ ಸಿಂಗ್ ಜೊತೆಗೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮಾರ್ಕೊ ಜಾನ್ಸೆನ್, ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್ಮನ್ ಇಬ್ರಾಹಿಂ ಜದ್ರಾನ್ ಮತ್ತು ನ್ಯೂಜಿಲೆಂಡ್ನ ವಿಧ್ವಂಸಕ ಆರಂಭಿಕ ಆಟಗಾರ ಫಿನ್ ಅಲೆನ್ ಆಯ್ಕೆ ಆಗಿದ್ದಾರೆ.
3/ 8
ಭಾರತದ ಯುವ ಆಟಗಾರ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅರ್ಷದೀಪ್ ಸಿಂಗ್ 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
4/ 8
21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಅರ್ಷದೀಪ್ 18.12ರ ಸರಾಸರಿಯಲ್ಲಿ 32 ವಿಕೆಟ್ ಪಡೆದಿದ್ದಾರೆ. ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಅರ್ಷದೀಪ್ ಹಿಂತಿರುಗಿ ನೋಡಲೇ ಇಲ್ಲ. ಹೊಸ ಚೆಂಡು ಹಾಗೂ ಡೆತ್ ಓವರ್ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮೂಲಕ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.
5/ 8
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕಕಾಲಕ್ಕೆ ಮೂರು ವಿಕೆಟ್ ಕಬಳಿಸಿದ್ದರು. ಈ ಮೂಲಕ ಅರ್ಷದೀಪ್ ಸಿಂಗ್ ಟೀಂ ಇಂಡಿಯಾದಲ್ಲಿ ಇದೀಗ ಖಾಯಂ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
6/ 8
ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮಾರ್ಕೊ ಜಾನ್ಸೆನ್ ಎಲ್ಲಾ ಮೂರು ಸ್ವರೂಪಗಳಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ವಿಶೇಷವಾಗಿ ಟೆಸ್ಟ್ನಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈವರೆಗೆ ಜಾನ್ಸೆನ್ ಒಂಬತ್ತು ಟೆಸ್ಟ್ಗಳಲ್ಲಿ 41 ವಿಕೆಟ್ಗಳನ್ನು ಕಬಳಿಸಿದ್ದಾರೆ.
7/ 8
ಅಫ್ಘಾನಿಸ್ತಾನದ ಬ್ಯಾಟ್ಸ್ಮನ್ ಇಬ್ರಾಹಿಂ ಜದ್ರಾನ್ ಏಕದಿನ ಮತ್ತು ಟಿ20ಐಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಬ್ರಾಹಿಂ 8 ಏಕದಿನ ಪಂದ್ಯಗಳನ್ನು ಆಡಿದ್ದು 432 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳನ್ನು ಗಳಿಸಿರುವುದು ಅದ್ಭುತ.
8/ 8
ನ್ಯೂಜಿಲೆಂಡ್ನ ವಿಧ್ವಂಸಕ ಆರಂಭಿಕ ಆಟಗಾರ ಫಿನ್ ಅಲೆನ್ ತಮ್ಮ ಬ್ಯಾಟಿಂಗ್ ಮೂಲಕ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ವೃತ್ತಿ ಜೀವನದಲ್ಲಿ 25 ಟಿ20 ಪಂದ್ಯಗಳನ್ನಾಡಿರುವ ಫಿನ್ ಅಲೆನ್ 567 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿವೆ. ಸ್ಟ್ರೈಕ್ ರೇಟ್ 163.4 ಆಗಿವೆ.