ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಗೋವಾ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ತಂದೆ ಸಚಿನ್ ಅವರನ್ನು ಸರಿಗಟ್ಟಿದ್ದಾರೆ. ರಣಜಿ ಟ್ರೋಫಿಯ ಎರಡನೇ ಪಂದ್ಯದಲ್ಲಿ ಅರ್ಜುನ್ ತಮ್ಮ ಮಾರಕ ಬೌಲಿಂಗ್ ಮೂಲಕ ಜಾರ್ಖಂಡ್ ಬ್ಯಾಟ್ಸ್ ಮನ್ ಗಳನ್ನು ಕಾಡುತ್ತಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅರ್ಜುನ್ನ ಅದ್ಭುತ ಪ್ರದರ್ಶನಕ್ಕೆ ಯೋಗರಾಜ್ ಸಿಂಗ್ ಅವರು ಕಾರಣ ಎನ್ನಲಾಗುತ್ತಿದೆ.
ಅರ್ಜುನ್ ತನ್ನ ತಂದೆಯ ನೆರಳಿನಿಂದ ಹೊರಬರಬೇಕಾಗಿತ್ತು. ನಾನು ಅವನಿಗೆ ಹೇಳಿದೆ - ನೀವು ಮೊದಲು ಅರ್ಜುನ್ ಮತ್ತು ನಂತರ ಅರ್ಜುನ್ ತೆಂಡೂಲ್ಕರ್ ಮತ್ತು ಸಚಿನ್ ಅವರ ಮಗನಾಗುತ್ತೀಯಾ. ಯೋಗರಾಜ್ ಸಿಂಗ್ ಅವರು ತಮ್ಮ ಕಠಿಣ ತರಬೇತಿಗೆ ಹೆಸರುವಾಸಿಯಾಗಿದ್ದಾರೆ. ಕ್ರಿಕೆಟ್ ತರಬೇತಿ ಸಮಯದಲ್ಲಿ ಯೋಗರಾಜ್ ಯುವರಾಜ್ ಸಿಂಗ್ ಬಗ್ಗೆ ತುಂಬಾ ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದರಂತೆ.