Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

Akash Madhwal: ಟಿ20 ಲೀಗ್ ನ 16ನೇ ಸೀಸನ್ ನಲ್ಲಿ ಪಾದಾರ್ಪಣೆ ಮಾಡಿದ ವೇಗದ ಬೌಲರ್, ಪಂದ್ಯದಲ್ಲಿ 5 ವಿಕೆಟ್ ಪಡೆದು ವರ್ಷದ ಆಟಗಾರ ಎನಿಸಿಕೊಂಡರು.

First published:

  • 18

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ -2 ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 81 ರನ್‌ಗಳಿಂದ ಜಯ ಸಾಧಿಸಿತು. ಈಗ ಮೇ 26 ರಂದು ರೋಹಿತ್ ಶರ್ಮಾ ತಂಡ ಮುಂಬೈ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ.

    MORE
    GALLERIES

  • 28

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    ಮುಂಬೈ ಇಂಡಿಯನ್ಸ್ ಪರ ಐಪಿಎಲ್ 2023ರಲ್ಲಿ ಪಾದಾರ್ಪಣೆ ಮಾಡಿದ ವೇಗದ ಬೌಲರ್ ಆಕಾಶ್ ಮಧ್ವಲ್ ಭರ್ಜರಿ ಪ್ರದರ್ಶನ ನೀಡಿದರು. ಅವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 3.3 ಓವರ್‌ಗಳಲ್ಲಿ ಕೇವಲ 5 ರನ್‌ಗಳಿಗೆ 5 ವಿಕೆಟ್ ಪಡೆದರು. ಅಲ್ಲದೆ 17 ಡಾಟ್ ಬಾಲ್ ಗಳನ್ನು ಬೌಲ್ ಮಾಡಿದರು. ಇದು ಐಪಿಎಲ್ ಇತಿಹಾಸದ ಪ್ಲೇಆಫ್‌ನಲ್ಲಿ ಬೌಲರ್‌ನ ಅತ್ಯುತ್ತಮ ಪ್ರದರ್ಶನವಾಗಿದೆ.

    MORE
    GALLERIES

  • 38

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    2018ರವರೆಗೂ 29ರ ಹರೆಯದ ಆಕಾಶ್ ಟೆನಿಸ್ ಬಾಲ್ ಕ್ರಿಕೆಟ್ ಮಾತ್ರ ಆಡುತ್ತಿದ್ದರು. ಅಷ್ಟೇ ಅಲ್ಲ ಇಂಜಿನಿಯರ್ ಆಗಿ 9ರಿಂದ 5ರ ವರೆಗೆ ಕನ್ ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಶ್ವವಿದ್ಯಾನಿಲಯದಲ್ಲಿ ಕ್ರಿಕೆಟ್ ಆಡಿದ್ದ ಮಧ್ವಲ್ ಅವರು 24 ನೇ ವಯಸ್ಸಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಬದಲಿಗೆ ಲೆದರ್ ಬಾಲ್ ಕ್ರಿಕೆಟ್ ಆಡಲು ನಿರ್ಧರಿಸಿದರು. ಐಪಿಎಲ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದ ಮಾಧ್ವಲ್ ಅನೇಕ ಅಭಿಮಾನಿಗಳಿಗೆ ತಿಳಿದಿಲ್ಲದಿರಬಹುದು. ಅವರಿಗೆ ಆಡಲು ಅವಕಾಶ ಸಿಗದಿದ್ದರೂ, ನೆಟ್ ಬೌಲರ್ ಆಗಿದ್ದರು.

    MORE
    GALLERIES

  • 48

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    2018 ರಲ್ಲಿ, ಅವರು ತಮ್ಮ ಕೆಲಸವನ್ನು ತೊರೆದರು ಮತ್ತು ರಿಷಭ್​ ಪಂತ್ ಅವರ ಬಾಲ್ಯದ ಕೋಚ್ ಅವತಾರ್ ಸಿಂಗ್ ಅವರ ಬಳಿ ತರಬೇತಿ ಪಡೆದರು. ಆಕಾಶ್ ಮಧ್ವಲ್ ಅವರು ಉತ್ತರಾಖಂಡದ ನಗರಗಳಲ್ಲಿ ತಿರುಗಾಡುತ್ತಿದ್ದರು ಮತ್ತು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದರು ಎಂದು ಅವತಾರ್ ಸಿಂಗ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ. ಅವರು ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದರು, ಇದರಿಂದಾಗಿ ಅವರು ಶಿಕ್ಷಣ ಮತ್ತು ಉದ್ಯೋಗದ ಬಳಿಕ ಕ್ರಿಕೆಟ್​ ಆಡುತ್ತಿದ್ದರು.

    MORE
    GALLERIES

  • 58

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    ಟೆನಿಸ್ ಬಾಲ್ ನಂತರ, ಅವರು ಹಾರ್ಡ್ ಬಾಲ್ನೊಂದಿಗೆ ಬೌಲಿಂಗ್ ಮಾಡಲು ಪ್ರಾರಂಭಿಸಿದ ಕೆಲವೇ ದಿನಗಳ ಬಳಿಕ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ರಾಜ್ಯ ತಂಡಕ್ಕಾಗಿ ಆಡುತ್ತಾರೆ ಮತ್ತು ಸೀಮಿತ ಓವರ್‌ಗಳ ತಂಡದ ನಾಯಕರೂ ಆಗಿ ಆಯ್ಕೆಯಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.

    MORE
    GALLERIES

  • 68

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    ಉತ್ತರಾಖಂಡ್ ರಣಜಿ ತಂಡದ ತರಬೇತುದಾರ ಮನೀಶ್ ಝಾ ಅವರು ಆಕಾಶ್ ಮಧ್ವಲ್ ಅವರು ದೀರ್ಘಕಾಲ ಟೆನಿಸ್ ಬಾಲ್ ಆಡಲು ಸ್ಥಿರತೆಯ ಕೊರತೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಬೌಲಿಂಗ್ ಮಾಡುವಾಗ ಅವರು ತ್ವರಿತ ಬದಲಾವಣೆಗಳನ್ನು ಮಾಡುತ್ತಿದ್ದರು. 2019-20ನೇ ಸಾಲಿನ ಮೊದಲು ರಾಜ್ಯ ತಂಡದ ಟ್ರಯಲ್ ನೀಡಲು ಆಕಾಶ್ ಬಂದಿದ್ದರು.

    MORE
    GALLERIES

  • 78

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    ಆಗ ಕೋಚ್ ಆಗಿದ್ದವರು ವಾಸಿಂ ಜಾಫರ್. ವೇಗದ ಬೌಲರ್ ಆಕಾಶ್ ಅವರ ಸ್ಕಿಡ್ ಬಾಲ್ ನಿಂದ ಜಾಫರ್ ಪ್ರಭಾವಿತರಾದರು. ಅವರು ಮೊದಲ ಟ್ರಯಲ್‌ನಲ್ಲೇ ಅವರಿಗೆ ಟಿ20 ಮುಷ್ತಾಕ್ ಅಲಿ ಟ್ರೋಫಿಗೆ ತಂಡದಲ್ಲಿ ಸ್ಥಾನ ನೀಡಿದರು. ಮನೀಷ್ ಝಾ ಅವರು ವಿಜಯ್ ಹಜಾರೆ ಟ್ರೋಫಿಗೆ ಉತ್ತರಾಖಂಡ ತಂಡದ ಕೋಚ್ ಆಗಿದ್ದಾರೆ ಮತ್ತು ಅವರು ಆಕಾಶ್ ಮಧ್ವಲ್‌ಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಅವಕಾಶ ನೀಡುವ ಬಗ್ಗೆ ಮಾತನಾಡಿದ್ದರು.

    MORE
    GALLERIES

  • 88

    Akash Madhwal: ಈತ ಆರ್​ಸಿಬಿ ಬಳಸದ ಬ್ರಹ್ಮಾಸ್ತ್ರ, ಮುಂಬೈ ಪಾಲಿಗೆ ಚಿನ್ನದ ಮೊಟ್ಟೆ! ಈ ಆಟಗಾರನ ಕಥೆಯೇ ರೋಚಕ!

    ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪದಾರ್ಪಣೆ ಮಾಡಿದ ಆಕಾಶ್ ಮಧ್ವಲ್ ಮೊದಲ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಮುಂದಿನ ಪಂದ್ಯದಲ್ಲಿ, ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಛಾಪು ಮೂಡಿಸಿದ್ದರು. ನಂತರ ಕೊನೆಯ ಲೀಗ್ ಸುತ್ತಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ ಹಾಗೂ ಈಗ ಲಖನೌ ವಿರುದ್ಧ 5 ವಿಕೆಟ್ ಪಡೆದಿದ್ದಾರೆ. ಇದುವರೆಗೆ ಐಪಿಎಲ್‌ನ 7 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಒಟ್ಟಾರೆ ಟಿ20 ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ ಆಕಾಶ್ 29 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ.

    MORE
    GALLERIES