ಭಾರತದ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಕೆಲವು ತಿಂಗಳ ಹಿಂದೆಯಷ್ಟೇ 2ನೇ ಮಗುವಿನ ತಂದೆಯಾದರು. ಈ ಮಾಹಿತಿಯನ್ನು ರಹಾನೆ ಈಗಾಗಲೇ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು, ಆದರೆ ಇದೀಗ ಅವರು ತಮ್ಮ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ. ರಹಾನೆ ಪತ್ನಿ ರಾಧಿಕಾ ಧೋಪಾವ್ಕರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಮಗನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಮಗನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.
ಅಜಿಂಕ್ಯ ರಹಾನೆ ಮತ್ತು ರಾಧಿಕಾ ಧೋಪಾವ್ಕರ್ ಮುಂಬೈನಲ್ಲಿ 26 ನವೆಂಬರ್ 2014 ರಂದು ಅದ್ಧೂರಿಯಾಗಿ ವಿವಾಹವಾದರು. ಮದುವೆಯಲ್ಲಿ ಅನೇಕ ಸಹ ಕ್ರಿಕೆಟಿಗರು ಮತ್ತು ಬಿಸಿಸಿಐ ಸದಸ್ಯರು ಉಪಸ್ಥಿತರಿದ್ದರು. ಮದುವೆಗೆ ವಧು-ವರರು ಮಹಾರಾಷ್ಟ್ರ ಶೈಲಿಯ ಬಟ್ಟೆಗಳನ್ನು ಧರಿಸಿದ್ದರು. ರಾಧಿಕಾ ಹಳದಿ ಮತ್ತು ಹಸಿರು ಬಣ್ಣದ ಸೀರೆ ಉಟ್ಟಿದ್ದರು. ಅಜಿಂಕ್ಯಾ ಹಸಿರು ಪೈಜಾಮಾದೊಂದಿಗೆ ಬೀಜ್ ಮತ್ತು ಗೋಲ್ಡನ್ ಶೆರ್ವಾನಿ ಧರಿಸಿದ್ದರು.