ಅವರು 195 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್ಗಳೊಂದಿಗೆ 132 ರನ್ ಗಳಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇರಳ ಮೊದಲ ಇನಿಂಗ್ಸ್ನಲ್ಲಿ 475 ರನ್ಗಳಿಗೆ ಆಲೌಟ್ ಆಗಿತ್ತು. ಕೇರಳದ ನಾಯಕರಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಸಂಜು ಸ್ಯಾಮ್ಸನ್ 72 ರನ್, ಮಧ್ಯಮ ಬ್ಯಾಟ್ಸ್ಮನ್ ಅಕ್ಷಯ್ ಚಂದ್ರನ್ 150, ಎಸ್ ಜೋಸೆಫ್ 83, ಆರಂಭಿಕ ರೋಹನ್ ಪ್ರೇಮ್ 79 ಮತ್ತು ಇನ್ನೋರ್ವ ಆರಂಭಿಕ ರೋಹನ್ ಕುನ್ನುಮ್ಮಲ 50 ರನ್ ಗಳಿಸಿದರು.