ಬಾಲಿವುಡ್ ನಟಿಯರಿಗೆ ಭಾರತ ಮಾತ್ರವಲ್ಲದೆ ವಿಶ್ವದ ಅನೇಕ ದಿಗ್ಗಜ ಕ್ರೀಡಾಪಟುಗಳ ಜೊತೆ ಲವ್ ಅಫೇರ್ ಇದೆ ಎಂಬ ಸುದ್ದಿ ಇದೆ. ಅದರಲ್ಲಿ ಬಾಲಿವುಡ್ ನಟಿ ಕಿಮ್ ಶರ್ಮಾ ಕೂಡ ಇತ್ತೀಚಿನ ದಿನಗಳಲ್ಲಿ ಬಾರಿ ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಸಿನಿಮಾಗಳಲ್ಲ, ಬದಲಾಗಿ ಇಬ್ಬರು ದಿಗ್ಗ ಕ್ರೀಡಾಪಟುಗಳು. ಭಾರತದ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಮತ್ತು ಕಿಮ್ ಶರ್ಮಾ ನಡುವಿನ ಸಂಬಂಧ ಕಳೆದ 2 ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ, ಇಬ್ಬರೂ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.