

ಮೊಬೈಲ್ ಮತ್ತು ಟಿವಿ ಇಂದಿನ ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ. ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ಫೋನ್ ಇರುವುದೇ ಇದಕ್ಕೆ ಸಾಕ್ಷಿ. ಅಷ್ಟೇ ಅಲ್ಲದೆ ಮಕ್ಕಳಿಗೂ ಸ್ಮಾರ್ಟ್ಫೋನ್ ಎಂಬುದು ಇಂದು ಆಟಿಕೆಗಳಾಗಿ ಹೋಗಿವೆ. ಮಕ್ಕಳ ಬಗ್ಗೆ ಬೇರೆಲ್ಲಾ ವಿಷಯಗಳಿಗೆ ಕಾಳಜಿವಹಿಸುವ ಪೋಷಕರೇ ಪುಟಾಣಿಗಳ ಕೈಗೆ ಫೋನ್ ಕೊಟ್ಟು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ದುರಂತ. ಸ್ಮಾರ್ಟ್ಫೋನ್ನಿಂದ ಮಕ್ಕಳ ಮೇಲೆ ಬೀರುವ ಪರಿಣಾಮದ ಬಗ್ಗೆ ತಿಳಿಯಿರಿ.


ಆಟಿಕೆಗಳಾಗಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ನೀಡುವಾಗ ಎಚ್ಚರಿಕೆ. ಏಕೆಂದರೆ ಸ್ಮಾರ್ಟ್ಫೋನ್ನಿಂದ ಮಕ್ಕಳ ಚಲನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಶಾರೀರಿಕ ಬೆಳವಣಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸ್ಮಾರ್ಟ್ಫೋನ್ ಬಳಸುವುದರಿಂದ ಅವರ ವಿಕಾಸ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ.


ನಿರಂತರವಾಗಿ ಮೊಬೈಲ್ನಲ್ಲಿ ಆಡುವ ಮಕ್ಕಳು ಸ್ಥೂಲಕಾಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಲ್ಲದೆ ಯಾವಾಗಲೂ ಏಕಾಂಗಿಯಾಗಿ ಇರುವುದರಿಂದ ಮಾನಸಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.


ಸ್ಮಾರ್ಟ್ಫೋನ್ ಮತ್ತು ಇತರೆ ಗ್ಯಾಜೆಟ್ಗಳ ಬಳಕೆಯಿಂದ ಮಕ್ಕಳಲ್ಲಿ ದೃಷ್ಟಿದೋಷದ ಸಮಸ್ಯೆಗಳು ಕಾಣಿಸುತ್ತದೆ. ತುಂಬಾ ಹೊತ್ತು ಬ್ಯಾಕ್ಲಿಟ್ ಸ್ಕ್ರೀನ್ ವೀಕ್ಷಿಸುವುದರಿಂದ ಕಣ್ಣಿನ ಆರೋಗ್ಯ ಹದಗೆಡುತ್ತದೆ.


ಪೋಷಕರು ಕೂಡ ಗ್ಯಾಜೆಟ್ಗಳಲ್ಲಿ ಹೆಚ್ಚು ಸಮಯ ಕಳೆಯಬಾರದು. ಏಕೆಂದರೆ ಇದು ಕೂಡ ಮಕ್ಕಳ ಬೆಳವಣಿಗೆ ಮತ್ತು ಜೀವನ ಶೈಲಿ ಮೇಲೆ ಪರಿಣಾಮ ಬೀರುತ್ತದೆ.