

ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕೆಲ್ ಮೇ.19 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು ಮೇಘನ್ ಮಾರ್ಕೆಲ್ ಮತ್ತು ನಟಿ <em>ಪ್ರಿಯಾಂಕಾ </em>ಚೋಪ್ರಾ ಸ್ನೇಹಿತರಾಗಿದ್ದು, ಈ ಮದುವೆ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಬಾಲಿವುಡ್ ಬೆಡಗಿ ಕಾಣಿಸಿಕೊಂಡರು.


"Welcomed by the UK sun...ಎಂಬ ಅಡಿಬರಹದೊಂದಿಗೆ ಮದುವೆ ಸಿದ್ದತೆಯ ಒಂದಷ್ಟು ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ.


Pre Wedding SHEnanigans! 12:10AM the morning of...and still waiting for the dress! ಅಡಿಬರಹದೊಂದಿಗೆ ಮದುವೆ ಪೂರ್ವದ ಫೋಟೋವನ್ನು ಹಂಚಿಕೊಂಡಿರುವ <em>ಪ್ರಿಯಾಂಕಾ </em>ಉಡುಗೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.


ಟೋಪಿಗಳ ಪೋಟೋ ಶೇರ್ ಮಾಡಿರುವ <em>ಪ್ರಿಯಾಂಕಾ</em> ಚೋಪ್ರಾ, ಇದರಲ್ಲಿ ಯಾವ ಟೋಪಿ ಹೊಂದಿಕೊಳ್ಳುತ್ತದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿಲ್ಲ ಎಂಬ ಅಡಿಬರಹವನ್ನು ನೀಡಿದ್ದರು.


ರಾಯಲ್ ವೆಡ್ಡಿಂಗ್ಗಾಗಿ ಬ್ರಿಟಿಷ್ ಫ್ಯಾಷನ್ ಡಿಸೈನರ್ ಫಿಲಿಪ್ ಟ್ರೈಸಿ ವಸ್ತ್ರ ವಿನ್ಯಾಸಗೊಳಿಸಿದ್ದಾರೆ. ಈ ಸಮಾರಂಭದಲ್ಲಿ <em>ಪ್ರಿಯಾಂಕಾ</em> ಚೋಪ್ರಾ ಬ್ರಿಟನ್ ಸಂಪ್ರಾದಾಯಿಕ ಉಡುಗೆಯಲ್ಲಿ ಕಾಣಿಸಿದರು.


ಬಾಲಿವುಡ್ ನಟಿ <em>ಪ್ರಿಯಾಂಕಾ</em> ಚೋಪ್ರಾ ಮತ್ತು ಹಾಲಿವುಡ್ ನಟಿ ಮೇಘನ್ ಮಾರ್ಕೆಲ್ ಅವರನ್ನು 2016ರಲ್ಲಿ ಲಾಸ್ ಏಂಜಲೀಸ್ನಲ್ಲಿ ಭೇಟಿಯಾಗಿದ್ದರು. 'ಕ್ವಾಂಟಿಕೊ' ಇಂಗ್ಲಿಷ್ ಟಿ.ವಿ ಸರಣಿಯಲ್ಲಿ ಅಭಿನಯಿಸಿರುವ <em>ಪ್ರಿಯಾಂಕಾ</em> ಹಾಲಿವುಡ್ನಲ್ಲೂ ಚಿರಪರಿಚಿತರಾಗಿದ್ದರು.