ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್​ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು

  • News18
  • |
First published:

  • 15

    ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್​ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು

    ಹಬ್ಬದ ಸೀಸನ್ ಶುರುವಾಗಿದೆ. ಇಂತಹ ಸಮಯದಲ್ಲಿ ಎಲ್ಲರು ತಮ್ಮ ಊರುಗಳಿಗೆ ತೆರಳುವುದು ಸಾಮಾನ್ಯ. ಹೀಗಾಗಿ ಬಸ್, ರೈಲುಗಳಲ್ಲಿ ಟಿಕೇಟ್ ಸಿಗುವುದು ತುಸು ಕಷ್ಟ. ಅದರಲ್ಲೂ ರೈಲಿನಲ್ಲಿ ತಿಂಗಳ ಮುಂಚೆಯೇ ಟಿಕೆಟ್​ಗಳು ಬುಕ್ ಆಗಿರುತ್ತವೆ. ಉಳಿದಿರುವುದು ಜನರಲ್ ಟಿಕೆಟ್​ಗಳು ಮಾತ್ರ. ಈ ಟಿಕೆಟ್​ಗಳನ್ನು ಪಡೆಯುವುದು ಕೂಡ ಹರಸಾಹಸ ಎಂದರೆ ತಪ್ಪಾಗಲಾರದು. ಪ್ರಯಾಣಿಕರ ಈ ಥರದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಇಲಾಖೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ನೀವು ಜನರಲ್ ಟಿಕೆಟ್​ಗಳ​ನ್ನು ಕೂಡ ಮೊಬೈಲ್​ನಲ್ಲಿ ಪಡೆಯಬಹುದು. UTS (ಅನ್​ರಿಸರ್ವಡ್ ಟಿಕೆಟ್ ಸ್ಟಿಸ್ಟಂ) ಎಂಬ ಅಪ್ಲಿಕೇಶನ್ನು ರೈಲ್ವೇ ಇಲಾಖೆ ಆರಂಭಿಸಿದ್ದು, ಇಲ್ಲಿ ನೀವು ಕಾಯ್ದಿರಿಸಲಾಗದ ಟಿಕೆಟ್​ನ್ನು ಪಡೆಯಬಹುದು. ಇದರಿಂದ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯುವ ತೊಂದರೆ ತಪ್ಪಲಿದೆ. ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಲಭ್ಯವಿದ್ದು ಇದನ್ನು ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ.​

    MORE
    GALLERIES

  • 25

    ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್​ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು

    ಮೊದಲಿಗೆ ನಿಮ್ಮ ಮೊಬೈಲ್​ನಲ್ಲಿ UTS ಅಪ್ಲಿಕೇಶನ್​ ಡೌನ್​ಲೋಡ್ ಮಾಡಿ. ನಂತರ ನಿಮ್ಮ ವಿವರಗಳನ್ನು ನೀಡುವ ಮೂಲಕ ಖಾತೆಯನ್ನು ನೋಂದಾಯಿಸಿ. ಇಲ್ಲಿ ಹೆಸರು ಮೊಬೈಲ್ ಸಂಖ್ಯೆ, ಐಡಿ ಕಾರ್ಡ್​ ಸಂಖ್ಯೆ ತುಂಬಬೇಕಾಗುತ್ತದೆ. ಇದಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸುತ್ತಾರೆ. ಆನಂತರ ನಿಮಗೆ ಮೆಸೇಜ್ ಮೂಲಕ ನಿಮ್ಮ ಮೊಬೈಲ್​ಗೆ ಐಡಿ ಮತ್ತು ಪಾಸ್​ವರ್ಡ್​ನ್ನು ಕಳುಹಿಸಲಾಗುತ್ತದೆ. ಈ ಐಡಿಯನ್ನು ಬಳಸಿ ನೀವು UTS ಆ್ಯಪ್​ನಲ್ಲಿ ಲಾಗಿನ್ ಆಗಬಹುದು. ಲಾಗಿನ್ ನಂತರ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ R-Wallet ಎಂಬ ಆಯ್ಕೆ ಇರುತ್ತದೆ.

    MORE
    GALLERIES

  • 35

    ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್​ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು

    R-Wallet ಅನ್ನು ಆನ್​ಲೈನ್ ಬ್ಯಾಂಕಿಂಗ್ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್​ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು. 100 ರೂ. ರಿಂದ 10 ಸಾವಿರದವರೆಗೆ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, 10 ಸಾವಿರ ಮಾಡಿಕೊಂಡರೆ 500 ರೂ.ಗಳ ಕ್ಯಾಶ್​ಬ್ಯಾಕ್ ಆಫರ್ ಕೂಡ ಸಿಗಲಿದೆ. ಈ ವ್ಯಾಲೆಟ್ ಮೂಲಕ ಟಿಕೆಟ್​ಗಳನ್ನು ಖರೀದಿಸಬಹುದು.

    MORE
    GALLERIES

  • 45

    ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್​ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು

    UTS ಆ್ಯಪ್​ನಲ್ಲಿ ಟಿಕೆಟ್​ ಬುಕ್ ಮಾಡಿಕೊಳ್ಳು ಎರಡು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಒಂದು ಪೇಪರ್​ಲೆಸ್​ ಟಿಕೆಟ್ ಮತ್ತೊಂದು ಪ್ರಿಂಟ್ ಟಿಕೆಟ್​. ಈ ಎರಡು ಟಿಕೇಟ್ ನಿಯಮಗಳು ಕೂಡ ವಿಭಿನ್ನವಾಗಿದ್ದು, ನೀವು ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿದ್ದರೆ ಪೇಪರ್​ಲೆಸ್​ ಟಿಕೆಟ್ ಆಯ್ಕೆಯನ್ನು ಪಡೆಯಬಹುದು. ಈ ಆಯ್ಕೆಯ ಮೂಲಕ ಟಿಕೆಟ್​ ನೇರವಾಗಿ ನಿಮ್ಮ ಮೊಬೈಲ್​ಗೆ ಡೌನ್​ಲೋಡ್ ಆಗಲಿದೆ.

    MORE
    GALLERIES

  • 55

    ರೈಲು ಪ್ರಯಾಣಿಕರ ಗಮನಕ್ಕೆ: ಇನ್ಮುಂದೆ ಮೊಬೈಲ್​ನಲ್ಲೇ ಜನರಲ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು

    ಎರಡನೇಯದು ಪ್ರಿಂಟ್ ಟಿಕೆಟ್​. ಈ ಆಯ್ಕೆಯನ್ನು ನೀವು ರೈಲು ನಿಲ್ದಾಣದಿಂದ ದೂರದಲ್ಲಿದ್ದಾಗ ಬಳಸಬಹುದಾಗಿದೆ. ಇಲ್ಲಿ ನೀವು ಟಿಕೆಟ್ ಬುಕ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಪ್ರಿಂಟ್ ಟಿಕೆಟ್ ಇಲ್ಲದಿದ್ದರೆ ನಿಮ್ಮ ಟಿಕೆಟ್ ಮಾನ್ಯತೆ ಪಡೆಯುವುದಿಲ್ಲ. ಭಾರತೀಯ ರೈಲ್ವೇ ಇಲಾಖೆಯ ಈ ಹೊಸ ಸೇವೆಯು ಲಕ್ಷಾಂತರ ಭಾರತೀಯರಿಗೆ ಪ್ರಯೋಜನವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    MORE
    GALLERIES