ಲಕ್ನೋ: ಒಂದು ಕಾಲದಲ್ಲಿ ಕೊಲೆ, ಸುಲಿಗೆ, ಬೆದರಿಕೆಗಳ ಮೂಲಕ ಜನರನ್ನು ಭಯಭೀತಗೊಳಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡುತ್ತಿದ್ದವರ ಪ್ಯಾಂಟ್‌ಗಳು ಈಗ ಒದ್ದೆಯಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬಾಟ್ಲಿಂಗ್ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿರುವ ಆದಿತ್ಯನಾಥ್, ಕಾನೂನು ಸುವ್ಯವಸ್ಥೆಗೆ ಬೆಲೆ ಕೊಡದವರು ಈಗ ಅವರ ಜೀವ ಉಳಿಸಿಕೊಳ್ಳುವುದಕ್ಕೆ ಓಡಾಡುತ್ತಿರುವುದನ್ನು ರಾಜ್ಯದ ಜನರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
2/ 7
2006 ರಲ್ಲಿ ಉಮೇಶ್ ಪಾಲ್ ಎಂಬ ವಕೀಲನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ/ ಎಂಎಲ್ಎ ಕೋರ್ಟ್ ಇತ್ತೀಚೆಗೆ ಗ್ಯಾಂಗ್ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್‌ಗೆ ಶಿಕ್ಷೆ ನೀಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
3/ 7
ದರೋಡೆಕೋರ, ಕೊಲೆಗಡುಕ ಅತೀಕ್ ಅಹ್ಮದ್ ವಿರುದ್ಧ ಇಲ್ಲಿವರೆಗೆ 100 ಪ್ರಕರಣಗಳು ದಾಖಲಾಗಿದ್ದು, ಆತನಿಗೆ ಇದುವರೆಗೆ ಶಿಕ್ಷೆಯಾಗಿರಲಿಲ್ಲ. ಹೀಗಾಗಿ ಆತನಿಗೆ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ.
4/ 7
ನ್ಯಾಯಾಲಯವು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದಾಗ, ಅವರ ಒದ್ದೆಯಾದ ಪ್ಯಾಂಟ್‌ಗಳು ಗೋಚರಿಸುತ್ತಿದೆ. ಜನರು ಅದನ್ನು ನೋಡುತ್ತಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
5/ 7
ಈ ಹಿಂದೆ ಮಾಫಿಯಾದಲ್ಲಿದ್ದವರು ಜನರನ್ನು ಭಯಭೀತಗೊಳಿಸುತ್ತಿದ್ದರು, ಕೈಗಾರಿಕೋದ್ಯಮಿಗಳಿಗೆ ಸುಲಿಗೆ ಬೆದರಿಕೆಗಳನ್ನು ಕಳುಹಿಸುತ್ತಿದ್ದರು, ಉದ್ಯಮಿಗಳನ್ನು ಅಪಹರಿಸುತ್ತಿದ್ದರು. ಆದರೆ ಇಂದು ಅವರು ಬದುಕಿಕೊಳ್ಳಲು ಒಡುತ್ತಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
6/ 7
ಈ ಹಿಂದೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ರಾಜ್ಯದ ಜನರ ನೆಮ್ಮದಿ ಕೆಡಿಸುತ್ತಿರುವ ಅಪರಾಧ ಜಗತ್ತಿನ ಎಲ್ಲಾ ಮಾಫಿಯಾಗಳನ್ನು ಹೆಡೆಮುರಿ ಕಟ್ಟುವುದಾಗಿ ಯೋಗಿ ಆದಿತ್ಯನಾಥ್ ಗುಡುಗಿದ್ದರು.
7/ 7
ಇದೀಗ ಯೋಗಿ ಆದಿತ್ಯನಾಥ್ ದರೋಡೆಕೋರರು, ಸುಲಿಗೆಕೋರರು ಸೇರಿದಂತೆ ಗ್ಯಾಂಗ್‌ಸ್ಟರ್‌ಗಳ ಬಗ್ಗೆ ನೀಡಿರುವ ಹೇಳಿಕೆ ಭಾರೀ ಕುತೂಹಲ ಮೂಡಿಸಿದ್ದು, ಮಾಫಿಯಾ ಜಗತ್ತಿನಲ್ಲಿ ಭಯ ಹುಟ್ಟಿಸಿದೆ ಎಂದು ಹೇಳಲಾಗ್ತಿದೆ.