Rape in America: ಅಮೆರಿಕದಲ್ಲಿ ರೈಲಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ; ವಿಡಿಯೋ ಚಿತ್ರೀಕರಿಸಿದ ಸಹ ಪ್ರಯಾಣಿಕರು
ಅಮೆರಿಕದ (America) ಫಿಲಿಡೆಲ್ಪಿಯಾದ ಸಬ್ವೇ ಟ್ರೈನ್ನಲ್ಲಿ (Philadelphia subway) ಯುವತಿಯ ಮೇಲೆ ಅತ್ಯಾಚಾರ (Rape) ಘಟನೆ ನಡೆದಿದ್ದು, ಇದನ್ನು ಸಹ ಪ್ರಯಾಣಿಕರು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಅಮಾನವೀಯ ಘಟನೆ ನಡೆದಿದೆ. ಘಟನೆ ವೇಳೆ ಯಾರು ಕೂಡ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಆಗ್ನೇಯ ಪೆನ್ಸಿಲ್ವೇನಿಯಾ ಸಾರಿಗೆ ಪ್ರಾಧಿಕಾರ (Southeastern Pennsylvania Transportation Authority- Septa))ದ ರೈಲಿನಲ್ಲಿ ಅಕ್ಟೋಬರ್ 13 ರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿ ಎಂದು ಸೆಪ್ಟಾ ಟ್ರಾನ್ಸಿಟ್ ಪೋಲಿಸ್ ಮುಖ್ಯಸ್ಥ ಥಾಮಸ್ ನೆಸ್ಟೆಲ್ ತಿಳಿಸಿದ್ದಾರೆ.
2/ 6
ಘಟನೆ ಕುರಿತು ಮಾತನಾಡಿರುವ ಅವರು, ಈ ಅತ್ಯಾಚಾರ ಘಟನೆ ವೇಳೆ ಯಾರೊಬ್ಬರು 911(ಅಮೆರಿಕ ಪೊಲೀಸರ ತುರ್ತು ಕರೆ ನಂಬರ್)ಗೆ ಫೋನ್ ಮಾಡಿಲ್ಲ. ಜೊತೆಗೆ ಘಟನೆ ತಡೆಯುವ ಯತ್ನಕ್ಕೂ ಮುಂದಾಗಿಲ್ಲ. ಇದರ ಬದಲಾಗಿ ಅವರು ತಮ್ಮ ಫೋನ್ನಲ್ಲಿ ಘಟನೆ ಚಿತ್ರೀಕರಣ ನಡೆಸಿದ್ದಾರೆ.
3/ 6
ಪ್ರಯಾಣಿಕರಲ್ಲಿ ಯಾರಾದರೂ ಒಬ್ಬರು ಕೂಡ ಪೊಲೀಸರಿಗೆ ಕರೆ ಮಾಡಿದ್ದರೆ, ಈ ಘಟನೆ ತಡೆಯಬಹುದಿತ್ತು. ನಿಜಕ್ಕೂ ಇದೊಂದು ಭಯಾನಕ ಅಪರಾಧ ಕೃತ್ಯ ಎಂದು ಸೆಪ್ಟಾ ವಕ್ತಾರ ಜಾನ್ ಗೋಲ್ಡನ್ ತಿಳಿಸಿದ್ದಾರೆ.
4/ 6
ರಾತ್ರಿ 9.15 ರ ನಂತರ ಆರೋಪಿ ರೈಲು ಗಾಡಿ ಹತ್ತಿದ ಒಂದು ನಿಮಿಷದ ನಂತರ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದಾನೆ. ಈ ವೇಳೆ ಆಕೆಯ ಮೇಲೆ ಆತ ಎರಗಲು ಮುಂದಾಗಿದ್ದಾನೆ. ಮಹಿಳೆ ಸಾಕಷ್ಟು ಪ್ರತಿರೋದ ತೋರಿದ್ದರು. ಆತ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
5/ 6
ಸುಮಾರು 40 ನಿಮಿಷಗಳ ಬಳಿಕ ಒಬ್ಬ ಪ್ರಯಾಣಿಕ ಪೊಲೀಸರಿಗೆ ಕರೆ ಮಾಡಿದ್ದಾನೆ. ತಕ್ಷಣಕ್ಕೆ ಪೊಲೀಸರು ಆಗಮಿಸಿದ್ದು, ಅತ್ಯಾಚಾರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನೆ ಕುರಿತು ಪೊಲೀಸರು ಸಂಪೂರ್ಣವಾಗಿ ತನಿಖೆಗೆ ಮುಂದಾಗಿದ್ದಾರೆ.
6/ 6
ಬಂಧಿತ ಆರೋಪಿಯನ್ನು 35 ವರಷ ಫಿಸ್ಟನ್ ಎನ್ಗಾಯ್ ಎಂದು ಗುರುತಿಸಲಾಗಿದೆ, ಈತ ನಿರಾಶ್ರಿತ ಎಂಬುದು ಪತ್ತೆಯಾಗಿದ್ದು, ಈತನನ್ನು ಬಂಧಿಸಲಾಗಿದೆ. ಅಕ್ಟೋಬರ್ 25ರಂದು ಪ್ರಕರಣ ಕುರಿತು ವಿಚಾರಣೆ ನಡೆಯಲಿದೆ.