Mother Kills her Children: ಅತ್ತೆ ಜೊತೆ ಭಯಂಕರ ಜಗಳ; ತನ್ನಿಬ್ಬರು ಗಂಡು ಮಕ್ಕಳಿಗೆ ಬೆಂಕಿಯಿಟ್ಟ ಸೊಸೆ!
ಪ್ರತಿಯೊಂದು ಸಂಸಾರದಲ್ಲೂ ಕುಟುಂಬಸ್ಥರ ಮಧ್ಯೆ ಮನಸ್ತಾಪ, ಜಗಳಗಳು ಸಾಮಾನ್ಯ. ಅತ್ತೆ-ಸೊಸೆ ಜಗಳಗಳು ಹೊಸದೇನು ಅಲ್ಲ. ಆದರೆ ಯಾವುದೂ ಅತಿರೇಕಕ್ಕೆ ಹೋಗಬಾರದು. ಆದರೆ ಇಲ್ಲಿ ಆಗಬಾರದ್ದೇ ಆಗಿದೆ.
ಸೊಸೆಯೊಬ್ಬಳು ಅತ್ತೆಯ ಜೊತೆ ಜಗಳವಾಡಿ ಕೋಪದಲ್ಲಿ ತನ್ನಿಬ್ಬರು ಪುಟ್ಟ ಮಕ್ಕಳಿಗೆ ಬೆಂಕಿಯಿಟ್ಟು, ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷ ತಾಯಿ, 7 ಹಾಗೂ 4 ವರ್ಷದ ಗಂಡು ಮಕ್ಕಳು ಮೂವರು ದುರಂತ ಅಂತ್ಯ ಕಂಡಿದ್ದಾರೆ. (ಸಾಂದರ್ಭಿಕ ಚಿತ್ರ)
2/ 6
ಈ ದಾರುಣ ಘಟನೆ ನಡೆದಿರುವುದು ಗುಜರಾತಿನ ರಾಜ್ಕೋಟಾ ಜಿಲ್ಲೆಯಲ್ಲಿ. ಮಕ್ಕಳಿಗೆ ಬೆಂಕಿಯಿಟ್ಟು 28 ವರ್ಷದ ಮಹಿಳೆ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯಲ್ಲಿ ಮೂವರೂ ಮೃತಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)
3/ 6
ನಗರದ ನಕ್ರವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ದಯಾಬೆನ್ ದೇದಾನಿಯಾ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಮಕ್ಕಳು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಕುವಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 6
ಮೃತ ಮಹಿಳೆ ತನ್ನ ಗಂಡ, ಮಕ್ಕಳು, ಅತ್ತೆ ಮತ್ತು ಸೋದರ ಮಾವನೊಂದಿಗೆ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದರು. ಮಹಿಳೆ ತನ್ನ ಅತ್ತೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದಳು. ಕೌಟುಂಬಿಕ ಜಗಳವೇ ಕೊನೆಗೆ ವಿಕೋಪಕ್ಕೆ ಹೋಗಿದೆ. (ಸಾಂದರ್ಭಿಕ ಚಿತ್ರ)
5/ 6
ಘಟನೆ ನಡೆದ ಸಮಯದಲ್ಲಿ ಗಂಡ-ಬಾಮೈದಾ ಮನೆಯಲ್ಲಿ ಇರಲಿಲ್ಲ, ಆದರೆ ಅತ್ತೆ ಮನೆಯಲ್ಲಿಯೇ gujಇದ್ದರು. ಅತ್ತೆ ವಾಷ್ ರೂಂಗೆ ಹೋಗಿ ಹೊರ ಬಂದಾಗ ಕೊಠಡಿಯಿಂದ ಹೊಗೆ ಬರುತ್ತಿರುವುದನ್ನು ನೋಡಿದ್ದಾರೆ. (ಸಾಂದರ್ಭಿಕ ಚಿತ್ರ)
6/ 6
ಕೂಡಲೇ ಅತ್ತೆ ಸಹಾಯಕ್ಕಾಗಿ ಕಿರುಚಿದ್ದಾರೆ. ಸಹಾಯ ದೊರೆಯುವಷ್ಟರಲ್ಲಿ ಮೂವರು ತೀವ್ರವಾಗಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)