ಪುಣೆಯ ಕೊಂಡ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಂದೂಕು ತೋರಿಸಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಲ್ಲದೇ ವಿಡಿಯೋ ರೆಕಾರ್ಡ್ ಮಾಡಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರು ದಾಖಲಾಗಿದೆ.
2/ 7
ಪ್ರಕರಣ ಸಂಬಂಧ 48 ವರ್ಷದ ಸಂತ್ರಸ್ತ ಮಹಿಳೆ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರಂತೆ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
3/ 7
ಆರೋಪಿಗಳನ್ನು ಜುಗ್ನು ಅಲಿಯಾಸ್ ಶಫೀಕ್ ಶೇಖ್ (45), ಮುಷ್ತಾಕ್ ಮೊಮಿನ್, ಕೇತನ್ ಮತ್ತು ಮಹಾರಾಜ್ ಎಂದು ಗುರುತಿಸಲಾಗಿದ್ದು, ಎಫ್‌ಐಆರ್ ದಾಖಲಿಸಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.
4/ 7
ಅಂದಹಾಗೆ, ದೂರುದಾರ ಮಹಿಳೆ ಮತ್ತು ಆರೋಪಿ ಜುಗ್ನು ಯಾನೆ ಶಫೀಕ್ ಶೇಖ್ ‘ಭಿಷಿ ಗ್ರೂಪ್ಸ್’ನಲ್ಲಿ ಪಾಲುದಾರರಾಗಿದ್ದರು. ಈ ಕಂಪನಿ 2020ರಲ್ಲಿ ಕ್ಲೋಸ್ ಆಗಿತ್ತು. ಹೀಗಾಗಿ ಆರೋಪಿ ಶೇಖ್ ಬೇರೆ ಯಾವುದಾದರೂ ವ್ಯವಹಾರ ಮಾಡುವ ಬಗ್ಗೆ ಮಹಿಳೆಯ ಬಗ್ಗೆ ಪ್ರಸ್ತಾಪ ಇಟ್ಟಿದ್ದ.
5/ 7
ಹೀಗಾಗಿ 2020-21ರಲ್ಲಿ ಬ್ಯುಸಿನೆಸ್ ಮಾಡುವ ಸಲುವಾಗಿ 4 ಕೋಟಿ ರೂಪಾಯಿ ಕೊಡುವಂತೆ ಆರೋಪಿಯು ಮಹಿಳೆಗೆ ತಿಳಿಸಿದ್ದ. ಆಗ ಸಂತ್ರಸ್ತ ಮಹಿಳೆ ತನ್ನ ಸ್ನೇಹಿತನಿಂದ 6 ಕಂತುಗಳಲ್ಲಿ 50 ಲಕ್ಷ ಹೊಂದಿಸಿ ಶೇಖ್‌ಗೆ ನೀಡಿದ್ದರು.
6/ 7
ಆದರೆ ಹಣ ಪಡೆದುಕೊಂಡ ಆರೋಪಿಯು ವ್ಯಾಪಾರವನ್ನೂ ಆರಂಭಿಸಿಲ್ಲ, ಇತ್ತ ಮಹಿಳೆಗೆ ದುಡ್ಡನ್ನೂ ವಾಪಸ್ ಕೊಡದೆ ವಂಚಿಸಿದ್ದಾನೆ. ಕೇಳಲು ಹೋದರೆ ಏನಾದರೂ ಕಾರಣ ನೀಡಿ ತಪ್ಪಿಸಿಕೊಂಡಿದ್ದಾನೆ.
7/ 7
ಹೀಗಾಗಿ ಮಹಿಳೆ ಆರೋಪಿಯ ಮನೆಗೆ ಹೋಗಿ ದುಡ್ಡು ಕೇಳಲು ಹೋಗಿದ್ದು, ಆಗ ಆರೋಪಿಯು ಮಹಿಳೆಯನ್ನು ಬೆಡ್‌ರೂಂಗೆ ಕರೆದು ಗನ್ ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಆಗ ಅಲ್ಲೇ ಇದ್ದ ಆರೋಪಿಗಳು ಫೋಟೋ ವಿಡಿಯೋ ತೆಗೆದುಕೊಂಡು ಪದೇ ಪದೇ ಅತ್ಯಾಚಾರ ಎಸಗಿದ್ದಾರೆ.