ಬೆಂಗಳೂರು: ಇತ್ತೀಚೆಗೆ ವಿಮಾನ ಪ್ರಯಾಣದ ವೇಳೆ ಪ್ರಯಾಣಿಕನೊಬ್ಬನ ವೇಳೆ ವಿದ್ಯಾರ್ಥಿಯೊಬ್ಬ ಮೂತ್ರ ವಿಸರ್ಜನೆ ನಡೆದಿತ್ತು. ತಿಂಗಳ ಹಿಂದೆ ಸಂಸದ ತೇಜಸ್ವಿ ಸೂರ್ಯ ಅಚಾನಕ್ ಆಗಿ ವಿಮಾನದ ತುರ್ತು ಬಾಗಿಲು ತೆರೆದ ಪ್ರಕರಣವೂ ವರದಿಯಾಗಿತ್ತು. ಅಷ್ಟೇ ಏಕೆ ಕಳೆದ ಸೋಮವಾರ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಲ್ಲದೇ ತಡೆಯಲು ಬಂದ ಸಿಬ್ಬಂದಿಗೆ ಚಾಕುವಿನಿಂದ ಇರಿದ ಘಟನೆಯೂ ಲಾಸ್ ಏಂಜಲೀಸ್‌ನಲ್ಲಿ ನಡೆದಿತ್ತು. ಅಂದ್ರೆ ಇತ್ತೀಚೆಗೆ ವಿಮಾನದಲ್ಲಿ ನಿಯಮ ಉಲ್ಲಂಘಿಸುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದು ಇದೀಗ ಮತ್ತೊಮ್ಮೆ ಇಂತಹದೇ ಪ್ರಕರಣ ನಡೆದಿದೆ.
ಕೊಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ ಘಟನೆ ಮಾರ್ಚ್ 5ರಂದು ನಡೆದಿದೆ ಎಂದು ತಿಳಿದು ಬಂದಿದೆ.
2/ 7
ಪಶ್ಚಿಮ ಬಂಗಾಳದ ಯುವತಿ ಪ್ರಿಯಾಂಕ ಚಕ್ರವರ್ತಿ (24) ಎಂಬಾಕೆ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದು, ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆಗೂ ಮುನ್ನ ಸಿಗರೇಟ್ ಸೇದಿದ್ದಾಳೆ ಎಂದು ಹೇಳಲಾಗಿದೆ.
3/ 7
ಕಳೆದ ಮಾರ್ಚ್ 5ರಂದು ರಾತ್ರಿ ಸುಮಾರು 9.50 ರ ಸುಮಾರಿಗೆ ಕೋಲ್ಕತ್ತಾದಿಂದ ಬೆಂಗಳೂರಿಗೆ ) ಇಂಡಿಗೊ 6E716 ವಿಮಾನ ಹೊರಟಿತ್ತು.
4/ 7
ವಿಮಾನದ ಸಿಬ್ಬಂದಿ ಶೌಚಾಲಯದ ಬಾಗಿಲನ್ನು ತೆರೆದಾಗ ಡಸ್ಟ್‌ಬಿನ್‌ನಲ್ಲಿ ಸಿಗರೇಟಿನ ತುಂಡು ಪತ್ತೆಯಾಗಿದೆ. ಆಗ ಅವರು ಡಸ್ಟ್‌ಬಿನ್‌ಗೆ ನೀರು ಸುರಿದು ಕ್ಲೀನ್ ಮಾಡಿದ್ದಾರೆ.
5/ 7
ನಂತರ ವಿಷಯವನ್ನು ವಿಮಾನದ ಮೇಲಾಧಿಕಾರಿಗಳಿಗೆ ಸಿಬ್ಬಂದಿ ತಲುಪಿಸಿದ್ದು, ಅದರನ್ವಯ ವಿಮಾನ ಬೆಂಗಳೂರಲ್ಲಿ ಲ್ಯಾಂಡ್ ಆಗ್ತಿದ್ದಂತೆ ಯುವತಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ.
6/ 7
ಆರೋಪಿತೆ ಯುವತಿ ಪ್ರಿಯಾಂಕ ಚಕ್ರವರ್ತಿ (24) ಇಂಡಿಗೊ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡ್ತಿದ್ದಲ್ಲದೇ, ಅದರ ತುಂಡನ್ನು ಶೌಚಾಲಯದ ಡಸ್ಟ್‌ಬಿನ್‌ನಲ್ಲಿ ಹಾಕಿದ್ದಳು.
7/ 7
ಸದ್ಯ ಯುವತಿಯ ವಿರುದ್ಧ ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಪ್ರಕರಣ ದಾಖಲಿಸಲಾಗಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಪಶ್ಚಿಮ ಬಂಗಾಳದ ಯುವತಿ ಪ್ರಿಯಾಂಕ ಚಕ್ರವರ್ತಿ (24) ಎಂಬಾಕೆ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದು, ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆಗೂ ಮುನ್ನ ಸಿಗರೇಟ್ ಸೇದಿದ್ದಾಳೆ ಎಂದು ಹೇಳಲಾಗಿದೆ.