Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

ಮೀರತ್‌: ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ತನ್ನದೇ 10 ವರ್ಷದ ಮಗ ಮತ್ತು 6 ವರ್ಷದ ಮಗಳನ್ನು ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

First published:

  • 17

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಕಳೆದ ಮಾರ್ಚ್‌ 22ರಂದು ಈ ಘಟನೆ ನಡೆದಿದ್ದು, ಮಕ್ಕಳನ್ನು ಕೊಂದ ನಂತರ ಪ್ರಿಯಕರ ಮತ್ತು ಆ ಮಹಿಳೆ ಇಬ್ಬರು ಮಕ್ಕಳ ಮೃತ ದೇಹವನ್ನು ಪಕ್ಕದಲ್ಲಿ ಇದ್ದ ಕಾಲುವೆಗೆ ಎಸೆದಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

    MORE
    GALLERIES

  • 27

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಮಹಿಳೆಯ ಪ್ರಿಯಕರ ಸ್ಥಳೀಯ ಕೌನ್ಸಿಲರ್ ಆಗಿದ್ದು, ಈ ಕೊಲೆ ಪ್ರಕರಣದಲ್ಲಿ ಮಹಿಳೆಯ ಅಕ್ಕಪಕ್ಕದ ಮನೆಯವರು ಕೂಡ ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 37

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಇಬ್ಬರು ಪುಟ್ಟ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡ ಪೊಲೀಸರು ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸಿದ್ದಾರೆ.

    MORE
    GALLERIES

  • 47

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೀರತ್ ಎಸ್‌ಪಿ (ನಗರ ವಿಭಾಗ) ಪಿಯೂಷ್ ಸಿಂಗ್, ಮಾರ್ಚ್‌ 22 ರಂದು ಒಡ ಹುಟ್ಟಿದ 10 ವರ್ಷದ ಬಾಲಕ ಮತ್ತು 6 ವರ್ಷದ ಬಾಲಕಿಯನ್ನು ಅವರ ತಾಯಿಯೇ ಕೊಲೆ ಮಾಡಿ ಪ್ರೇಮಿಯ ಸಹಕಾರದಿಂದ ಶವವನ್ನು ಕಾಲುವೆಗೆ ಎಸೆದಿದ್ದರು’ ಎಂದು ತಿಳಿಸಿದ್ದಾರೆ.

    MORE
    GALLERIES

  • 57

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಪ್ರಕರಣ ನಡೆದ ಬಳಿಕ ಯಾರಿಗೂ ಗೊತ್ತಾಗಬಾರದು ಎಂದು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಆದರೆ ಕೂಲಂಕುಶವಾಗಿ ತನಿಖೆ ನಡೆಸಿದಾಗ ಮಕ್ಕಳ ಕೊಲೆ ಪ್ರಕರಣ ಬಯಲಿಗೆ ಬಂದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

    MORE
    GALLERIES

  • 67

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಇನ್ನು ಈ ಕೊಲೆ ಪ್ರಕರಣದಲ್ಲಿ ಮೂರು ಮಹಿಳೆಯರು ಮತ್ತು ಮೂವರು ಪುರುಷರು ಕೊಲೆಯಲ್ಲಿ ಭಾಗಿಯಾಗಿದ್ದಾರೆ. ಹುಡುಗಿಯನ್ನು ತನ್ನ ಮನೆಯಲ್ಲೇ ಕೊಂದರೆ, ಹುಡುಗನನ್ನು ಪಕ್ಕದ ಮನೆಯಲ್ಲಿ ಕೊಲೆ ಮಾಡಲಾಗಿದೆ. ಮಕ್ಕಳ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 77

    Crime News: ಇವಳೆಂಥಾ ತಾಯಿ! ಪ್ರಿಯಕರನ ಸಹಾಯದಿಂದ ತನ್ನದೇ ಇಬ್ಬರು ಮಕ್ಕಳನ್ನು ಕೊಂದ ಪಾತಕಿ!

    ಸದ್ಯ ಆರೋಪಿಗಳು ಪುಟ್ಟ ಮಕ್ಕಳನ್ನು ಯಾಕೆ ಕೊಲೆ ಮಾಡಿದ್ದಾರೆ ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಬಂಧಿತ ಆರೋಪಿಗಳಿಂದ ಕೊಲೆಯ ಉದ್ದೇಶ ಬಾಯ್ಬಿಡಿಸಲು ಪ್ಲಾನ್ ಮಾಡಿದ್ದಾರೆ.

    MORE
    GALLERIES