Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

ಅಸ್ಸಾಂ: ಕೆಲಸ ಕೊಡಿಸುವುದಾಗಿ ನಂಬಿಸಿ ಕಾರ್‌ನಲ್ಲಿ ಕರೆದೊಯ್ದು ಮಹಿಳೆಯ ಮೇಲೆ 9 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.

First published:

  • 17

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಅಸ್ಸಾಂ ರಾಜ್ಯದ ಹಜೋ ಪಟ್ಟಣದ ತಪಬರಿ ಚಾರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆಯ ಮನೆಯವರು ಪೊಲೀಸರಿಗೆ ದೂರು ನೀಡಿದ ನಂತರ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ.

    MORE
    GALLERIES

  • 27

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಪ್ರಮುಖ ಆರೋಪಿ ಅಲ್ತಾಫ್‌ ಎಂಬಾತ ಮಹಿಳೆಗೆ ಪರಿಚಯವಾಗಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಅದರಂತೆ ನಿಗದಿತ ಸ್ಥಳಕ್ಕೆ ಬರೋಕೆ ಹೇಳಿದ್ದ. ಅಲ್ಲಿ ಮಹಿಳೆ ಬಂದಾಗ ಕಾರ್‌ನಲ್ಲಿ ಪರಿಚಯದ ವ್ಯಕ್ತಿಯ ಜೊತೆಗೆ ಇನ್ನೂ ಎಂಟು ಮಂದಿ ಇದ್ದರು.

    MORE
    GALLERIES

  • 37

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಅಲ್ಲಿಂದ ಮಹಿಳೆಯನ್ನು ಕಾರ್‌ನಲ್ಲಿ ಕರೆದೊಯ್ದ 9 ಮಂದಿ ಆರೋಪಿಗಳು ಸಂತ್ರಸ್ತ ಮಹಿಳೆಯ ಮೇಲೆ ಕಾರ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 47

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಬಳಿಕ ಸಾವರಿಸಿಕೊಂಡು ಮನೆಗೆ ಬಂದ ಮಹಿಳೆ ಮನೆಯವರಲ್ಲಿ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಒಂಭತ್ತು ಮಂದಿ ಆರೋಪಿಗಳನ್ನೂ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 57

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಪ್ರಮುಖ ಆರೋಪಿ ಅಲ್ತಾಫ್ ಕ್ಯಾಬ್‌ ಚಾಲಕನಾಗಿದ್ದು, ಈತನನ್ನು ಗುರುವಾರ ರಾತ್ರಿ ಬಕ್ಸಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಪೊಲೀಸರು ಆತನ ಬಾಯ್ಬಿಡಿಸಿ ಉಳಿದ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    MORE
    GALLERIES

  • 67

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಈ ಬಗ್ಗೆ ಮಾತನಾಡಿದ ಕಮ್ರೂಪ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹಿತೇಶ್ ಚಂದ್ರ ರಾಯ್, ದೂರು ಬಂದ ಬೆನ್ನಲ್ಲೇ ಪೊಲೀಸರು ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದರು. ಪೊಲೀಸರು ಎಲ್ಲಾ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

    MORE
    GALLERIES

  • 77

    Shocking News: ಥೂ, ಮನುಷ್ಯರಾ ಇವ್ರು? ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯ ಮೇಲೆ 9 ಮಂದಿ ಗ್ಯಾಂಗ್‌ರೇಪ್‌!

    ಎರಡು ದಿನಗಳ ಹಿಂದಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ 19 ವರ್ಷದ ಯುವತಿಯನ್ನು ಕಾರ್‌ನಲ್ಲಿ ಕರೆದೊಯ್ದ ಇಬ್ಬರು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

    MORE
    GALLERIES