ಪುರ್ಬಾ ಬರ್ದಮಾನ್ ಜಿಲ್ಲೆಯ ಸ್ಮರಣ ಮಂಡಲದ ಪಾರಿಜಾತನಗರದವರಾದ ರೇಖಾದೇವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರಿಗೂ ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಆಕೆಯ ಪತಿ ಕೆಲವು ತಿಂಗಳ ಹಿಂದೆ ನಿಧನರಾದರು. ಆಲದ ಮರವನ್ನೇ ಮಗನೆಂದು ಭಾವಿಸುವ ರೇಖಾದೇವಿ, ಇದೀಗ ಆ ಮರಕ್ಕೆ ಮದುವೆ ಮಾಡಿಸಿದ್ದಾರೆ. ಸಂಬಂಧಿಕರನ್ನು ಕರೆಸಿ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ.
ಈ ಆಲದ ಮರಕ್ಕೆ ರೇಖಾದೇವಿ ಯಾರ ಜೊತೆ ಮದುವೆ ಮಾಡಿಸಿದ್ದಾರೆಂದರೆ ಆಶ್ಚರ್ಯ ಪಡುತ್ತೀರಿ. ಆ ಆಲದ ಮರದ ಪಕ್ಕದಲ್ಲಿ ಒಂದು ಅರಳಿ ಮರವಿದ್ದು, ಅದೇ ವಧು ಆಗಿದೆ. ರೇಖಾದೇವಿ ಅರಳಿ ಮರ ಮತ್ತು ಆಲದ ಮರಕ್ಕೆ ಮದುವೆ ಮಾಡಿಸಿ ತನ್ನ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಅವರೆಡು ಕೇವಲ ಮರಗಳಲ್ಲ. ನನ್ನ ಮಗ ಮತ್ತು ಸೊಸೆ, ಅವುಗಳನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡುತ್ತೇನೆ ಎನ್ನುತ್ತಾರೆ ರೇಖಾದೇವಿ.
ಆಲದ ಮರ ಮತ್ತು ಅರಳಿ ಮರಗಳಿಗೆ ಮದುವೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ನಿಜಕ್ಕೂ ಜನರ ಮದುವೆಯಂತೆಯೇ ಅದ್ಧೂರಿಯಾಗಿ ಮಾಡಲಾಗಿದೆ. ರೇಖಾ ದೇವಿಯ ಮರಗಳ ಮೇಲಿನ ಪ್ರೀತಿ ನೋಡಿ ನೆಟ್ಟಿಗರು ಆಶ್ಚರ್ಯವ್ಯಕ್ತಪಡಿಸಿದ್ದಾರೆ. ನಿಮ್ಮಂತಹವರಿದ್ದರೆ ಈ ಭೂಮಿ ಸದಾ ಹಸಿರಿನಿಂದ ಕೂಡಿರುತ್ತದೆ, ವರ್ಣಮಯವಾಗಿರುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.