Egg Killed Woman: ಮೊಟ್ಟೆ ಗಂಟಲಲ್ಲಿ ಸಿಲುಕಿ ಮಹಿಳೆ ಸಾವು
ಸಾವು ಹೇಗೆ ಯಾವಾಗ ಸಂಭವಿಸುತ್ತದೆ ಎನ್ನುವುದು ತಿಳಿಯದು. ಅದೇ ರೀತಿ ಇಲ್ಲಿ ಒಬ್ಬ ಮಹಿಳೆಗೆ ತಿನ್ನುತ್ತಿದ್ದ ಮೊಟ್ಟೆಯೇ ಯಮನ ಸ್ವರೂಪಿಯಾಗಿ ಬಂದಿದೆ. ಊಟದ ವೇಳೆ ಮೊಟ್ಟೆ ತಿನ್ನುವಾಗ ಅದು ಗಂಟಲಲ್ಲಿ ಸಿಲುಕಿ ಮಹಿಳೆ ಉಸಿರುಗಟ್ಟಿ ಸಾವನ್ನಪ್ಪಿರುವ ಕರುಣಾಜನಕ ಕಥೆ ನಡೆದಿದೆ.
ತೆಲಂಗಾಂಣದ ನೇರಳಪಲ್ಲಿಯಲ್ಲಿ ಈ ದುರ್ಘಟನೆ ನಡೆದಿದೆ. ನೀಲಮ್ಮ ಎಂಬ ಮಹಿಳೆಯ ಊಟ ಮಾಡುವಾಗ ಬೇಯಿಸಿದ ಮೊಟ್ಟೆಯನ್ನು ತಿನ್ನಲು ಹೋದಾಗ ಅದು ಗಂಟಲಲ್ಲಿ ಸಿಲುಕಿ ಆಕೆ ಸಾವನ್ನಪ್ಪಿದ್ದಾಳೆ.
2/ 6
ನೀಲಮ್ಮ ಊಟ ಮಾಡುವಾಗ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ದೊಡ್ಡ ಮೊಟ್ಟೆಯನ್ನೇ ಬಾಯಿಯೊಳಗೆ ಹಾಕಿಕೊಂಡಿದ್ದಾರೆ. ಈ ವೇಳೆ ಅದು ನೇರವಗಿ ಗಂಟಲಿಗೆ ಇಳಿದಿದೆ. ಗಂಟಲಲ್ಲಿ ಮೊಟ್ಟೆ ಸಿಲುಕಿದ ಪರಿಣಾಮ ಆಕೆ ಕೊನೆಯುಸಿರೆಳೆದಿದ್ದಾರೆ
3/ 6
ಗಂಟಲಲ್ಲಿ ಮೊಟ್ಟೆ ಸಿಲುಕಿದ ಪರಿಣಾಮ ನೀಲಮ್ಮ ಉಸಿರಾಡಲು ಕಷ್ಟವಾಗಿದೆ. ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೂ ಬಾರದೇ ಆಕೆ ತೀವ್ರವಾಗಿ ಉಸಿರಾಡಲು ಕಷ್ಟ ಅನುಭವಿಸಿ ಕ್ಷಣಾರ್ಥದಲ್ಲಿ ಆಕೆ ಸಾವನ್ನಪ್ಪಿದ್ದಾರೆ
4/ 6
ಕುಟುಂಬಸ್ಥರು ಆಕೆಯ ಸಾವಿನ ಬಳಿಕ ಮೊಟ್ಟೆಯನ್ನು ಕತ್ತರಿಸಿ ತಿಂದಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.
5/ 6
ಈ ಹಿಂದೆ ಗಂಟಲಲ್ಲಿ ಅನ್ನದ ಅಗಳಿ, ಶೇಂಗಾ ಬೀಜಗಳು ಸಿಲುಕಿ ಮಕ್ಕಳು ಪ್ರಾಣ ಕಳೆದುಕೊಂಡ ಪ್ರಕರಣಗಳು ದಾಖಲಾಗಿದ್ದವು. ಇದೀಗ ಮಧ್ಯ ವಯಸ್ಸಿನ ಮಹಿಳೆಯೊಬ್ಬರ ಗಂಟಲಲ್ಲಿ ಮೊಟ್ಟೆ ಸಿಲುಕಿ ಸಾವನ್ನಪ್ಪಿದ್ದಾರೆ