Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!

ಗುಜರಾತ್​ನ ರಾಜ್ ಕೋಟ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಸತ್ತ ಹಾವಿನೊಂದಿಗೆ ಆಸ್ಪತ್ರೆಗೆ ಆಗಮಿಸಿ ವೈದ್ಯರಿಗೆ, ಈ ಹಾವು ನಿನ್ನೆ ರಾತ್ರಿ ನನಗೆ ಕಚ್ಚಿದೆ ದಯವಿಟ್ಟು ನನ್ನನ್ನು ಬದುಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

First published:

  • 17

    MORE
    GALLERIES

  • 27

    ಈ ಮಹಿಳೆಯ ಮಾತನ್ನು ಕೇಳಿದ ವೈದ್ಯರೂ ಬೆಚ್ಚಿಬಿದ್ದಿದ್ದಾರೆ. ದುರ್ಗಾಬೆನ್​ ಚೌಹಾಣ್​ ಎಂಬ ಮಹಿಳೆ ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದಾಗ ಹಾವು ಹಾಸಿಗೆಯೊಳಗೆ ನುಗ್ಗಿದೆ. ಬೆಳಿಗ್ಗೆ ಎದ್ದಾಗ ಹಾವು ಹಾಸಿಗೆಯೊಳಗೆ ಇರುವ ಬಗ್ಗೆ ಆಕೆಯ ಗಮನಕ್ಕೆ ಬಂದಿದೆ ಎಂದು ವೈದ್ಯರಿಗೆ ತಿಳಿಸಿದ್ದಾರೆ.

    MORE
    GALLERIES

  • 37

    Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!

    ದುರ್ಗಾಬೆನ್ ಚೌಹಾಣ್ ಬೆಳಗ್ಗೆ ಎದ್ದ ಕೂಡಲೆ ಹಾಸಿಗೆಯಲ್ಲಿ ಹಾವು ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ರಾತ್ರಿ ಹಾವು ತನಗೆ ಕಚ್ಚಿದೆಯೋ, ಇಲ್ಲವೋ ಎಂಬುದು ಸಂಪೂರ್ಣ ಅರಿವಿಲ್ಲದ ಕಾರಣ ಆಕೆ ಭಯದಿಂದ ಉಪ್ಪನ್ನು ತಿಂದಿದ್ದಾರೆ, ಆದರೆ ಸಿಹಿಯಂತೆ ರುಚಿ ನೀಡಿದೆ ಇದರಿಂದ ಅವರ ಆತಂಕ ಮತ್ತಷ್ಟು ಹೆಚ್ಚಾಗಿದೆ.

    MORE
    GALLERIES

  • 47

    Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!

    ನಂತರ ಮಹಿಳೆ ಮೆಣಸಿನಕಾಯಿ ತಿಂದಿದ್ದಾರೆ, ಮೆಣಸಿನಕಾಯಿಯ ಖಾರವಾಗುವ ಬದಲು ಸಿಹಿ ರುಚಿ ಅನುಭವವಾಗಿದೆ. ರುಚಿಯಲ್ಲಿನ ಈ ಬದಲಾವಣೆಯನ್ನು ಕಂಡು ಮಹಿಳೆ ಹೆದರಿದ್ದು, ತನಗೆ ಹಾವು ಕಚ್ಚಿದೆ, ಅದಕ್ಕೆ ಹೀಗೆಲ್ಲಾ ಆಗುತ್ತಿದೆ ಎಂದು ಭಾವಿಸಿ 108 ನಂಬರ್‌ಗೆ ಫೋನ್ ಮಾಡಿದ್ದಾಳೆ.

    MORE
    GALLERIES

  • 57

    Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!

    ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಹೋಗುವಾಗ ಆ ಮಹಿಳೆ ಸತ್ತಿದ್ದ ಹಾವನ್ನು ಚೀಲದಲ್ಲಿ ತುಂಬಿಕೊಂಡು ಬಂದಿದ್ದಾಳೆ. ಆ್ಯಂಬುಲೆನ್ಸ್​ನಲ್ಲಿ ಬಂದ ಮಹಿಳೆಯನ್ನು ಸಿಬ್ಬಂದಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

    MORE
    GALLERIES

  • 67

    Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!

    ಆಸ್ಪತ್ರೆ ಒಳಗೆ ಹೋಗುವ ಮುನ್ನ ಮಹಿಳೆ ತಾನೂ ಚೀಲದಲ್ಲಿ ತಂದಿದ್ದ ಹಾವನ್ನು ವೈದ್ಯರಿಗೆ ತೋರಿಸಿ ' ಈ ಹಾವು ನನಗೆ ಕಚ್ಚಿದೆ, ಚಿಕಿತ್ಸೆ ಕೊಡಿ' ಎಂದು ಮನವಿ ಮಾಡಿದ್ದಾಳೆ

    MORE
    GALLERIES

  • 77

    Snake Bite: ಬ್ಯಾಗ್​ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!

    ಮಹಿಳೆ ತಂದಿದ್ದ ಸತ್ತ ಹಾವನ್ನು ನೋಡಿ ವೈದ್ಯರೂ ಅಚ್ಚರಿಗೊಂಡಿದ್ದಾರೆ. ಕೂಡಲೇ ಆ ಮಹಿಳೆಗೆ ಎಲ್ಲಾ ರೀತಿಯ ಪರೀಕ್ಷೆ ಮಾಡಿದ್ದು, ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಹಿಳೆ ಆರೋಗ್ಯವಾಗಿದ್ದಾಳೆ ಎಂದು ತಿಳಿದುಬಂದಿದೆ.

    MORE
    GALLERIES