Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

ಪ್ರೇಮಿಗಳಿಬ್ಬರು ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಮದುವೆ ದಿನ ಪ್ರೇಮಿಯ ಮನಸ್ಥಿತಿ ಬದಲಾಗಿದೆ. ಆ ದಿನ ದೇವಾಲಯಕ್ಕೆ ಬಾರದೆ ಪರಾರಿಯಾಗಿದ್ದಾನೆ.

First published:

  • 17

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ಉತ್ತರ ಪ್ರದೇಶದ ಬರೇಲಿಯಲ್ಲಿ ಒಂದು ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಪ್ರೇಮಿಗಳಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ದೇವಸ್ಥಾನದಲ್ಲಿ ಮದುವೆಯಾಗಬೇಕೆಂದು ನಿರ್ಧರಿಸಿದ್ದ ದಿನ ಪ್ರೇಮಿಯ ಮನಸ್ಥಿತಿ ಬದಲಾಗಿದೆ. ಆ ದಿನ ದೇವಾಲಯಕ್ಕೆ ಬಾರದೆ ಪರಾರಿಯಾಗಿದ್ದಾನೆ.

    MORE
    GALLERIES

  • 27

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ಇದರಿಂದ ವಿಚಲಿತಕ್ಕೊಳಗಾದ ಗೆಳತಿ.  ಪ್ರಿಯತಮನನ್ನು ಚೇಸ್​ ಮಾಡಿ ಹಿಡಿದಿದ್ದಾಳೆ. ಸುಮಾರು 20 ಕಿಮೀ ದೂರದವರೆಗೆ ಚೇಸ್ ಮಾಡಿದ ಯುವತಿ, ಆತನನ್ನು ಬಸ್​ನಿಂದ ಕಳಗೆ ಇಳಿಸಿ, ದೇವಾಲಯಕ್ಕೆ ಕರೆತಂದಿದ್ದಾಳೆ.

    MORE
    GALLERIES

  • 37

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ಸುಮಾರು ಎರಡು ಗಂಟೆಗಳ ಕಾಲ ಈ ಡ್ರಾಮ ನಡೆದಿದ್ದು, ಪ್ರಿಯಕರನನ್ನು ಬಲವಂತವಾಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಗೆಳತಿ ಮದುವೆ ಆಗುವಲ್ಲಿ ಯಶಸ್ವಿಯಾಗಿದ್ದಾಳೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ಬರೇಲಿಯ ಯುವತಿ ಬಡಾವುನ್ ಜಿಲ್ಲೆಯ ಯುವಕನೊಂದಿಗೆ ಎರಡೂವರೆ ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದಳು. ಆತನೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಳು. ಎರಡುಮನೆಯಲ್ಲಿ ಮದುವೆ ಮಾತುಕತೆ ಶುರು ಮಾಡಿದ್ದರಿಂದ, ಈ ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರು .  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ಯುವತಿಯ ಕುಟುಂಬ ಸದಸ್ಯರಿಗೆ ವಿಷಯ ತಿಳಿದು, ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದಾರೆ. ಸೋಮವಾರ ರಾಮನಗರ ರಸ್ತೆಯಲ್ಲಿರುವ ಭೂತೇಶ್ವರನಾಥ ದೇವಸ್ಥಾನದಲ್ಲಿ ಯುವತಿಯ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹಕ್ಕೆ ಸಿದ್ಧತೆ ನಡೆಸಲಾಗಿತ್ತು. ಯುವತಿ ತನ್ನ ಪ್ರಿಯಕರನೊಂದಿಗೆ ಹಸಮಣೆ ಏರುವುದಕ್ಕಾಗಿ ದೇವಸ್ಥಾನದ ಮಂಟಪಕ್ಕೆ ಮೊದಲು ತಲುಪಿದಳು, ಆದರೆ ಪ್ರೇಮಿಯ ಮನಸ್ಥಿತಿ ಇದ್ದಕ್ಕಿದ್ದಂತೆ ಬದಲಾಗಿದ್ದು, ಆತ ದೇವಾಲಯಕ್ಕೆ ಬಾರದೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ದೇವಾಲಯಕ್ಕೆ ಬಾರದಿದ್ದರಿಂದ ವಧು ತನ್ನ ಪ್ರಿಯತಮನಿಗೆ ಕರೆ ಮಾಡಿದಾಗ, ತಾನು ತಾಯಿಯನ್ನು ಕರೆದುಕೊಂಡು ಬರಲು ಬುಡಾವುನ್​ಗೆ ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಆಕೆಯೂ ಆತ ಹೋಗುತ್ತಿರುವ ಮಾರ್ಗದಲ್ಲಿ ಬಸ್​ ಚೇಸ್​ ಮಾಡಿ ಸುಮಾರು 20 ಕಿ.ಮೀ ದೂರದಲ್ಲಿ ಬಸ್​ನಲ್ಲಿದ್ದ ಪ್ರೇಮಿಯನ್ನು ಹಿಡಿದು ಮತ್ತೆ ದೇವಸ್ಥಾನಕ್ಕೆ ಕರೆತಂದು ಬಲವಂತ ಮಾಡಿ ಮದುವೆ ಆಗಿದ್ದಾಳೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Marriage: ಮದುವೆ ಮಂಟಪದಿಂದ ಪರಾರಿಯಾಗಲು ಪ್ರಿಯತಮ ಯತ್ನ, 20 ಕಿಮೀ ಚೇಸ್​ ಮಾಡಿ ಎಳೆದುಕೊಂಡು ಬಂದ ಹುಡುಗಿ!

    ಈ ವೇಳೆ ಅಪಾರ ಜನಸ್ತೋಮವೂ ನೆರೆದಿತ್ತು. ಜನಜಂಗುಳಿ ನೋಡಿ ಮುಜುಗರಕ್ಕೊಳಗಾದ ಪ್ರೇಮಿ ತನ್ನ ಗೆಳತಿಯೊಂದಿಗೆ ಮದುವೆಗೆ ಒಪ್ಪಿಗೆ ಸೂಚಿಸಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ. ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES