ಈ ಹಿಂದೆ ಭಾರತೀಯ ವಾಯುಪಡೆಯ ಮಹಿಳೆಯರು ತಮ್ಮ ಸೇವೆಯ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಆದರೆ ವಾಯುಪಡೆಯ ಮಹಿಳಾ ಅಧಿಕಾರಿಯೊಬ್ಬರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಇದೇ ಮೊದಲು ಎಂದು ಅವರು ಹೇಳಿದರು. ಉತ್ತರ ಮಧ್ಯಪ್ರದೇಶದಲ್ಲಿ ಆಗಸ್ಟ್ 2021ರ ಪ್ರವಾಹದ ವೇಳೆ ಮಿಶ್ರಾ ಅವರು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ರಕ್ಷಣಾ ಕಾರ್ಯಾಚರಣೆ ಎಂಟು ದಿನಗಳ ಕಾಲ ನಡೆದಿತ್ತು. ಈ ವೇಳೆ ಮಿಶ್ರಾ ಅವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 47 ಜನರ ಪ್ರಾಣವನ್ನು ಉಳಿಸಿದ್ದರು.