United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

ವಿಜಯಪ್ರಿಯ ನಿತ್ಯಾನಂದರ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳುವುದಾದರೆ ಆಕೆಯ ಲಿಂಕ್ಡ್‌ಇನ್ ಪ್ರೊಫೈಲ್ ಕೆಲವೊಂದು ಮಾಹಿತಿಗಳನ್ನು ಬಯಲು ಮಾಡಿದೆ. 2014 ರಲ್ಲಿ ಆಕೆ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದ್ದಾರೆ.

  • Trending Desk
  • |
  •   | Bangalore [Bangalore], India
First published:

  • 111

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಕೇಸರಿ ಬಣ್ಣದ ದಿರಿಸು, ಚಿನ್ನದ ಆಭರಣ, ರುದ್ರಾಕ್ಷಾ ಮತ್ತು ಶಿರಸ್ತ್ರಾಣ ಧರಿಸಿದ ಸುಂದರ ಮಹಿಳೆಯೊಬ್ಬರು ವಿಶ್ವಸಂಸ್ಥೆಯ ಈವೆಂಟ್‌ನಲ್ಲಿ ತಾನು ಸ್ವಯಂ-ಘೋಷಿತ ದೇವಮಾನವ ನಿತ್ಯಾನಂದ ಹಾಗೂ ಆತನ ದೇಶ ಯುಸ್‌ಕೆ (ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ) ಯ ಪ್ರತಿನಿಧಿ ಎಂದು ಹೇಳಿಕೊಂಡಿದ್ದು ಈ ವಿಚಾರ ಇಂಟರ್ನೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.

    MORE
    GALLERIES

  • 211

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಕಳೆದ ವಾರ ಜಿನೀವಾದಲ್ಲಿ ನಡೆದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ (CESCR) ಸಭೆಯಲ್ಲಿ ಮಾತನಾಡಿದ ಮಹಿಳೆ ವಿಜಯಪ್ರಿಯ ನಿತ್ಯಾನಂದ, ಸಾರ್ವಭೌಮ ರಾಜ್ಯವಾದ ಶ್ರೀ ಕೈಲಾಸದಿಂದ UN ಗೆ ಖಾಯಂ ರಾಯಭಾರಿ" ಎಂದು ತನ್ನನ್ನು ಪರಿಚಯಿಸಿಕೊಂಡರು. ಟ್ವಿಟರ್‌ನಲ್ಲಿ ಆಕೆಯನ್ನು ಕೈಲಾಸದಿಂದ ಮಾ ವಿಜಯಪ್ರಿಯ ನಿತ್ಯಾನಂದ ಎಂದು ಉಲ್ಲೇಖಿಸಲಾಗಿದೆ.

    MORE
    GALLERIES

  • 311

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    2014 ರಲ್ಲಿ ವಿಜಯಪ್ರಿಯ ಕೆನಡಾದ ಮ್ಯಾನಿಟೋಬಾ ವಿಶ್ವವಿದ್ಯಾಲಯದಿಂದ ಮೈಕ್ರೋಬಯಾಲಜಿಯಲ್ಲಿ ತಮ್ಮ ಬ್ಯಾಚುಲರ್ ಆಫ್ ಸೈನ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಅವರು ಇಂಗ್ಲಿಷ್, ಫ್ರೆಂಚ್, ಕ್ರಿಯೋಲ್ ಮತ್ತು ಪಿಡ್ಜಿನ್ಸ್‌ ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿದ್ದಾರೆ.

    MORE
    GALLERIES

  • 411

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಕಾಲೇಜಿನಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಸಾಧಿಸಿದ್ದರಿಂದ ಆಕೆ ಡೀನ್ ಗೌರವ ಪಟ್ಟಿಯಲ್ಲಿದ್ದರು ಎಂಬುದಾಗಿ ತಿಳಿಸಿದ್ದು 2013 ಮತ್ತು 2014 ರಲ್ಲಿ ಅಂತರರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿವೇತನವನ್ನು ಸಹ ಪಡೆದಿದ್ದಾರೆ ಎಂದು ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 511

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ವಿಶ್ವಸಂಸ್ಥೆಯ ಸಭೆಯಲ್ಲಿ ತಮ್ಮ ಸರದಿ ಬಂದಾಗ ಮಾತನಾಡಿದ ವಿಜಯಪ್ರಿಯ, ಕೈಲಾಸ ಹಾಗೂ ನಿತ್ಯಾನಂದರ ಬಗ್ಗೆ ಕೆಲವೊಂದು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

    MORE
    GALLERIES

  • 611

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಆಕೆ ತಿಳಿಸಿರುವಂತೆ ಕೈಲಾಸ ಹಿಂದೂಗಳ ಮೊದಲ ಸಾರ್ವಭೌಮ ರಾಜ್ಯವಾಗಿದ್ದು, ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ನಿತ್ಯಾನಂದ ಪರಮಶಿವಂ ಕೈಲಾಸವನ್ನು ಸ್ಥಾಪಿಸಿದ್ದಾರೆ ಎಂದು ತಿಳಿಸಿದ್ದಾರೆ.

    MORE
    GALLERIES

  • 711

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ನಿತ್ಯಾನಂದರು ಹಿಂದೂ ಧರ್ಮದ 10,000 ಸ್ಥಳೀಯ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುತ್ತಿದ್ದು ಇದರಲ್ಲಿ ಆದಿ ಶೈವ ಸ್ಥಳೀಯ ಕೃಷಿ ಬುಡಕಟ್ಟು ಕೂಡ ಸೇರ್ಪwಎಗೊಂಡಿದೆ ಎಂದು ವಿಜಯಾನಂದ ತಿಳಿಸಿದ್ದಾರೆ. ಆಕೆಯ ಹೇಳಿಕೆಗಳನ್ನು ವಿಶ್ವಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

    MORE
    GALLERIES

  • 811

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಅತ್ಯಾಚಾರ, ಚಿತ್ರಹಿಂಸೆ, ಅಪಹರಣ ಮತ್ತು ಮಕ್ಕಳನ್ನು ಅಕ್ರಮವಾಗಿ ಬಂಧಿಸುವುದು ಸೇರಿದಂತೆ ಭಾರತದಲ್ಲಿನ ಹಲವಾರು ಪ್ರಕರಣಗಳಲ್ಲಿ ನಿತ್ಯಾನಂದ ಪ್ರಮುಖ ಆರೋಪಿಯಾಗಿದ್ದಾನೆ. $400,000 ಆಪಾದಿತ ವಂಚನೆಗಾಗಿ ಫ್ರೆಂಚ್ ಅಧಿಕಾರಿಗಳು ಆತನನ್ನು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ನಿತ್ಯಾನಂದ 2019ರಲ್ಲಿ ಭಾರತದಿಂದ ಪರಾರಿಯಾಗಿದ್ದರು.

    MORE
    GALLERIES

  • 911

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯು (CESCR) 18 ಸ್ವತಂತ್ರ ತಜ್ಞರನ್ನೊಳಗೊಂಡಿದ್ದು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದ ಎಂದು ಕರೆಯಲಾದ ವಿಶ್ವಸಂಸ್ಥೆಯ ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.

    MORE
    GALLERIES

  • 1011

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ಸೇರುತ್ತದೆ. ಅದರ ಸಭೆಯ ಸಮಯದಲ್ಲಿ, ಸಾಮಾನ್ಯವಾಗಿ ಒಂದು ದಿನವನ್ನು ಒಂದು ನಿರ್ದಿಷ್ಟ ಹಕ್ಕು ಅಥವಾ ಒಪ್ಪಂದದ ನಿರ್ದಿಷ್ಟ ಅಂಶದ ಸಾಮಾನ್ಯ ಚರ್ಚೆಗೆ ಮೀಸಲಿಡಲಾಗುತ್ತದೆ.

    MORE
    GALLERIES

  • 1111

    United Nations: ಕೈಲಾಸದ ಪ್ರತಿನಿಧಿಯಾಗಿ ಭಾಗಿಯಾಗಿದ್ದ ವಿಜಯಪ್ರಿಯ ನಿತ್ಯಾನಂದ ಯಾರು? ಬಯಲಾಯ್ತು ವಿವರ

    ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನಡೆದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ 73 ನೇ ಅಧಿವೇಶನದಲ್ಲಿ "ದಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ" ಪ್ರತಿನಿಧಿಗಳು 19 ನೇ ಸಭೆಯಲ್ಲಿ ಮಾತನಾಡಿದರು. ಇದು ಸುಸ್ಥಿರ ಅಭಿವೃದ್ಧಿಯ ಕುರಿತು ಸಾಮಾನ್ಯ ಚರ್ಚೆಯ ದಿನವಾಗಿತ್ತು.

    MORE
    GALLERIES