ನ್ಯುವಾಂಗಿ ರೀಜೆನ್ಸಿ ಮತ್ತು ಬೊಂಡೋವೊಸೊ ರೀಜೆನ್ಸಿಯ ಗಡಿಯಲ್ಲಿರುವ ಜ್ವಾಲಾಮುಖಿಯು 4 ವೈಶಿಷ್ಟ್ಯಗಳಿಂದ ಸುದ್ದಿಯಾಗಿದೆ. ಮೊದಲನೆಯದು - ಅದರಿಂದ ಹೊರಹೊಮ್ಮುವ ನೀಲಿ ಲಾವಾ, ಎರಡನೇ ನೀಲಿ ಬೆಂಕಿ, ಮೂರನೆಯದು - ಆಮ್ಲೀಯ ಕುಳಿ ಸರೋವರ ಮತ್ತು ನಾಲ್ಕನೇಯದ್ದಾಗಿ ಸಲ್ಫರ್ ಗಣಿಗಾರಿಕೆ. ನೀಲಿ ಲಾವಾ ಹೊರಹೊಮ್ಮುವ ಜ್ವಾಲಾಮುಖಿಯನ್ನು ಕವಾಹ್ ಇಜೆನ್ ಜ್ವಾಲಾಮುಖಿ ಎಂದು ಕರೆಯಲಾಗುತ್ತದೆ.
ಗುರುಂಗ್ ಮೆರಾಪಿ ಎಂದರೆ ಬೆಂಕಿಯ ಪರ್ವತ. ಇಲ್ಲಿಂದ ಹೊರಹೊಮ್ಮುವ ಲಾವಾ ಯಾವಾಗಲೂ ವಿಜ್ಞಾನಿಗಳ ಅಧ್ಯಯನದ ಕೇಂದ್ರವಾಗಿದೆ. ಇಲ್ಲಿರುವ ಕುಳಿ ಸರೋವರವು ಸುಮಾರು 1 ಕಿಲೋಮೀಟರ್ ಅಗಲವಿದೆ, ಇದರಲ್ಲಿ ನೀಲಿ ಬಣ್ಣದ ನೀರು ಇರುತ್ತದೆ. ಇದು ಆಮ್ಲದ ಸರೋವರವಾಗಿದ್ದು, ಇಲ್ಲಿನ ನೀರು ಆಮ್ಲೀಯವಾಗಿದೆ ಎಂದು ಹೇಳಲಾಗುತ್ತದೆ. ಸಲ್ಫರ್ ಗಣಿಗಾರಿಕೆ ಇಲ್ಲಿಂದ ನಡೆಯುತ್ತದೆ, ಇದು ತುಂಬಾ ಅಪಾಯಕಾರಿ ಕೆಲಸ.