ಆಫ್ರಿಕಾ ಖಂಡವು ಶ್ರೀಮಂತ ಸಂಸ್ಕೃತಿ ಮತ್ತು ವಿಶ್ವದ ಅತ್ಯಂತ ಹಳೆಯ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಆಫ್ರಿಕಾ ಖಂಡವು ಅನೇಕ ರಾಷ್ಟ್ರಗಳು ಮತ್ತು ಬುಡಕಟ್ಟು ಜನಾಂಗಗಳಿಂದ ಕೂಡಿದೆ. ಈ ಪ್ರತಿಯೊಂದು ಬುಡಕಟ್ಟುಗಳು ತಮ್ಮದೇ ಸಂಸ್ಕೃತಿಯನ್ನು ಉಳಿಸಿಕೊಂಡು ಅನುಸರಿಸುತ್ತಾ ಬರುತ್ತಿದ್ದಾರೆ. ಅದರಲ್ಲಿಯೂ ಕೆಲವು ಆಚರಣೆಗಳು ಮತ್ತು ಹಬ್ಬಗಳು ಆಫ್ರಿಕನ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಾ ಬರುತ್ತಿದೆ. ಈ ಸಾಂಸ್ಕೃತಿಕ ಸಂಪ್ರದಾಯಗಳು ಬುಡಕಟ್ಟು ಜನರ ಜೀವನವನ್ನು ವ್ಯಾಖ್ಯಾನಿಸುತ್ತವೆ. ಅವರು ಏನು ಧರಿಸುತ್ತಾರೆ, ಅವರು ಹೇಗೆ ವರ್ತಿಸುತ್ತಾರೆ, ಅವರು ಏನು ತಿನ್ನುತ್ತಾರೆ, ಇತ್ಯಾದಿ (ಸಾಂಕೇತಿಕ ಚಿತ್ರ)
ಇಂದು ನಾವು ಆಫ್ರಿಕಾದಲ್ಲಿ ನಡೆಯುವ ವಿಚಿತ್ರವಾದ ಮೊದಲ ರಾತ್ರಿ ಸಂಪ್ರದಾಯದ ಬಗ್ಗೆ ಮಾತನಾಡುತ್ತಿದ್ದೇವೆ. ಇವುಗಳನ್ನು ಕೇಳಿದ ಮೇಲೆ ಜಗತ್ತಿನ ಯಾವ ಮೂಲೆಯಲ್ಲಿ ಈ ರೀತಿ ನಡೆಯುತ್ತಿದೆ ಎಂಬುವುದನ್ನು ನಂಬಲು ನಿಮಗೆ ಸಾಧ್ಯವಾಗುವುದಿಲ್ಲ. ಅಂತಹ ವಿಚಿತ್ರ ಸಂಪ್ರದಾಯದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಅಂದರೆ ಮದುವೆಯಾದ ಮೊದಲ ರಾತ್ರಿಯಲ್ಲಿ ನವ ದಂಪತಿಗಳು ಏಕಾಂಗಿಯಾಗಿ ಸಮಯ ಕಳೆಯುವಂತಿಲ್ಲ. (ಸಾಂಕೇತಿಕ ಚಿತ್ರ)
ಈ ವಿಚಿತ್ರ ಪದ್ಧತಿ ಕೆಲವು ಹಳ್ಳಿಗಳಲ್ಲಿ ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದರಿಂದ ಅಂತಹ ಸಂದರ್ಭಗಳಲ್ಲಿ ನಾಚಿಕೆಗೂ ತುತ್ತಾಗದೆ ಮಾರ್ಗದರ್ಶನ ಮಾಡುತ್ತಾರೆ. ಜಗತ್ತಿನಲ್ಲಿ ಲಿವ್ ಇನ್ ರಿಲೇಶನ್ ಶಿಪ್ ಇರುವ ಮಧ್ಯೆ, ಈ ಸಂಪ್ರದಾಯ ನಮಗೆ ನಿಜಕ್ಕೂ ವಿಚಿತ್ರ ಮತ್ತು ಹೆಚ್ಚು ಅತ್ಯಾಧುನಿಕವೆಂದು ಕಾಣಿಸುತ್ತದೆ, ಆದರೆ ಇಲ್ಲಿನ ಜನರು ಈ ಪದ್ಧತಿಯನ್ನು ಪ್ರಾಚೀನ ಕಾಲದಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ.