Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

ಒಡಿಶಾದ ಭದ್ರಕ್ ಜಿಲ್ಲೆಯ ಬಸುದೇವಪುರ ಪ್ರದೇಶ ಮಾರ್ಚ್ 29 ಬುಧವಾರದಂದು 30 ನಿಮಿಷಗಳಲ್ಲಿ ಬರೋಬ್ಬರಿ 5,000 ಮಿಂಚಿನ ಹೊಡೆತಗಳಿಗೆ ಸಾಕ್ಷಿಯಾಗಿದೆ.

  • Local18
  • |
  •   | Odisha (Orissa), India
First published:

  • 17

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    ಒಡಿಶಾದ ಭದ್ರಕ್ ಜಿಲ್ಲೆಯ ಬಸುದೇವಪುರ ಪ್ರದೇಶ ಮಾರ್ಚ್ 29 ಬುಧವಾರದಂದು 30 ನಿಮಿಷಗಳಲ್ಲಿ ಬರೋಬ್ಬರಿ 5,000 ಸಿಡಿಲು-ಮಿಂಚಿನ ಹೊಡೆತಗಳಿಗೆ ಸಾಕ್ಷಿಯಾಗಿದೆ.

    MORE
    GALLERIES

  • 27

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಬುಧವಾರ ರಾತ್ರಿಯೂ ಅರ್ಧ ಗಂಟೆಯೊಳಗೆ ಭದ್ರಕ್ ಜಿಲ್ಲೆಯ ಬಸುದೇವಪುರ ಪ್ರದೇಶದಲ್ಲಿ 5,000 ಕ್ಕೂ ಹೆಚ್ಚು ಸಿಡಿಲು ಬಡಿದ ವರದಿಯಾಗಿದೆ. ಈ ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

    MORE
    GALLERIES

  • 37

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    ಭುವನೇಶ್ವರದ ಹವಾಮಾನ ಕೇಂದ್ರದ ಹವಾಮಾನ ತಜ್ಞ ಉಮಾಶಂಕರ್ ದಾಸ್ ಅವರು ಈ ಕುರಿತು ಟ್ವೀಟ್‌ ಮಾಡಿದ್ದು, ' ಭದ್ರಕ್‌ನ ಬಸುದೇವಪುರ ಪ್ರದೇಶದಲ್ಲಿ ಕೇವಲ 30 ನಿಮಿಷಗಳಲ್ಲಿ 5000 ಕ್ಕೂ ಹೆಚ್ಚು ಬಾರಿ ಸಿಡಿಲು ಬಡಿದಿದೆ ' ಎಂದು ತಿಳಿಸಿದ್ದಾರೆ.

    MORE
    GALLERIES

  • 47

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    ಮತ್ತೊಂದು ಟ್ವೀಟ್‌ನಲ್ಲಿ " ಸಿಡಿಲು-ಮಿಂಚಿನ ಹೊಳಪು ಮತ್ತು ಹೊಡೆತಗಳು  0.2 ಸೆಕೆಂಡುಗಳ ಕ್ರಮವನ್ನು ತೆಗೆದುಕೊಂಡಿದೆ. ಮಿಂಚಿನ ವೇಗ ಮಿಲಿ ಸೆಕೆಂಡ್‌ಗಿಂತ ಕಡಿಮೆ ಇರುತ್ತದೆ ಮತ್ತು ಇದು ಅನೇಕ ಘಟನೆಗಳನ್ನು ಕಣ್ಣಿನಿಂದ ಗುರುತಿಸಲು ಸಾಧ್ಯವಾಗದಷ್ಟು ವೇಗವಾಗಿ ಪುನರಾವರ್ತಿಸುತ್ತದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 57

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    ಇನ್ನೂ ಒಡಿಶಾದ ಸುಂದರ್‌ಗಢ್, ಕಿಯೋಂಜಾರ್, ಮಯೂರ್‌ಭಂಜ್, ಬಾಲಸೋರ್, ಕಟಕ್, ಧೆಂಕನಲ್ ಮತ್ತು ಇತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

    MORE
    GALLERIES

  • 67

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    IMD ಪ್ರಕಾರ, ಒಡಿಶಾದಲ್ಲಿ ಮಿಂಚು ಮತ್ತು ರಭಸದ ಗಾಳಿಯೊಂದಿಗೆ ಗುಡುಗು ಸಹಿತ ಚಂಡಮಾರುತ  ಪ್ರವೇಶಿಸುವ ಸಾಧ್ಯತೆಯಿದೆ .

    MORE
    GALLERIES

  • 77

    Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?

    ಮಾರ್ಚ್‌ನಂತೆಯೇ ಏಪ್ರಿಲ್‌ ತಿಂಗಳೂ ಮಳೆಯಲ್ಲಿ ಮುಳುಗಿರುತ್ತದೆ. ಇಂದೂ ಕೂಡ ಮತ್ತೊಂದು ಪಶ್ಚಿಮ ಚಂಡಮಾರುತ ಪ್ರವೇಶಿಸುವ ಸಾಧ್ಯತೆಯಿದೆ. 10 ದಿನಗಳಲ್ಲಿ ಮೂರು ಪಶ್ಚಿಮ ಚಂಡಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ. ಇದರ ಪರಿಣಾಮ ರಾಜ್ಯದಲ್ಲಿ ಏಪ್ರಿಲ್ 3ರವರೆಗೆ ಮಳೆಯಾಗಲಿದೆ. ಏಪ್ರಿಲ್ 4 ರಂದು ಉತ್ತರ ಭಾರತದಾದ್ಯಂತ ಮತ್ತೊಂದು ಪಶ್ಚಿಮ ಚಂಡಮಾರುತವು ಬರಲಿದ್ದು, 10 ರವರೆಗೆ ಮಳೆಯಾಗಲಿದೆ ಎದು ಐಎಂಡಿ ಎಚ್ಚರಿಕೆ ನೀಡಿದೆ.

    MORE
    GALLERIES