ಈ ಪುರಾತನ ಮಾವಿನ ಮರವು ಸಂಜಾನ್ ಎಂಬ ಹಳ್ಳಿಯ ವಾಲಿ ಅಹ್ಮದ್ ಅಚ್ಚು ಎಂಬ ರೈತರ ಜಮೀನಿನಲ್ಲಿದೆ. ಈ ಹಳೆಯ ಮಾವಿನ ಮರವು ಪೂರ್ವಾಭಿಮುಖವಾಗಿ ಚಲಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸ್ಥಳೀಯ ನಿವಾಸಿಗಳು ಈ ಮಾವಿನ ಮರವನ್ನು ಬಹಳ ಪವಿತ್ರವೆಂದು ಪರಿಗಣಿಸಿ ಪೂಜಿಸುತ್ತಾರೆ. ಹಿಂದೂಗಳ ಮನೆಗಳಲ್ಲಿ ತುಳಸಿಯನ್ನು ಹೇಗೆ ಪೂಜಿಸುತ್ತಾರೋ.ಇಲ್ಲಿ ಈ ಮಾವಿನ ಮರವನ್ನೂ ಅದೇ ರೀತಿಯಲ್ಲಿ ಗೌರವಿಸಲಾಗುತ್ತಿದೆ.