ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಪೊಲೀಸ್ ಇಲಾಖೆ ಅಂದರೆ ಲವಲವಿಕೆಯಿಂದ ಕೂಡಿರಬೇಕು. ಜಡ್ಡುಗಟ್ಟಿದ ವಾತಾವರಣದಿಂದ ಮುಕ್ತವಾಗಬೇಕು. ಪೊಲೀಸ್ ಅಧಿಕಾರಿ, ಸಿಬ್ಬಂದಿ ದೈಹಿಕವಾಗಿ ಫಿಟ್ ಆಗಿರಬೇಕು. ಹೀಗಾಗಿ ಮದ್ಯವ್ಯಸನಿ ಮತ್ತು ಅಧಿಕ ಕೊಬ್ಬು ಹೊಂದಿರುವ ಪೊಲೀಸರಿಗೆ ನಿವೃತ್ತಿ ನೀಡಲಾಗುತ್ತಿದೆ. ಈ ಮೂಲಕ ಇಲಾಖೆಗೆ ಹೊಸ ರೂಪ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. (File Photo)
ಮೊದಲ ಹಂತದಲ್ಲಿ 300 ಪೊಲೀಸರಿಗೆ ವಿಆರ್‌ಎಸ್ ನೀಡಲಾಗುತ್ತಿದೆ. ಇವರು ಅತ್ಯಧಿಕ ಕೊಬ್ಬು, ಮದ್ಯವ್ಯಸನಿಗಳಾಗಿದ್ದಾರೆ. ಇದರಿಂದ ಅವರ ಕಾರ್ಯವೈಖರಿಯೂ ಕುಂದಿ ಹೋಗಿದೆ. ಅವರೆಲ್ಲರೂ ಸೇವೆಯಿಂದ ನಿವೃತ್ತರಾದರೂ, ಸರ್ಕಾರದ ನಿಯಮಾವಳಿಗಳಂತೆ ನಿಯಮಿತವಾಗಿ ಸಂಬಳ, ಸೌಲಭ್ಯ ಪಡೆಯಲಿದ್ದಾರೆ. ಅವರ ಜಾಗಕ್ಕೆ ಯುವ ಸಿಬ್ಬಂದಿಯ ನೇಮಕಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಸ್ಪಷ್ಟ ಪಡಿಸಿದ್ದಾರೆ. File Photo)
ಕುಡುಕ ನೌಕರರ ವಿರುದ್ಧ ಅಸ್ಸಾಂ ಸರ್ಕಾರದ ಕಠಿಣ ಕ್ರಮವನ್ನು ಬುದ್ಧಿಜೀವಿಗಳು ಮತ್ತು ಜನರು ಸ್ವಾಗತಿಸುತ್ತಾರೆ. ಆದರೆ ಇದು ಪೊಲೀಸ್ ಅಧಿಕಾರಿಗಳನ್ನು ಅವಮಾನಿಸಲು ಅಲ್ಲ, ಅತಿಯಾಗಿ ಕುಡಿದು ಅವರ ಆರೋಗ್ಯಕ್ಕೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿರುವ ಸಿಎಂ, ಅಸ್ಸಾಂ ಸರ್ಕಾರವು ಈಗಾಗಲೇ ವಿಆರ್‌ಎಸ್ ಹೆಸರಿನಲ್ಲಿ ವಜಾ ಮಾಡಿರುವ 300 ಉದ್ಯೋಗಿಗಳ ಬದಲಿಗೆ ಹೊಸ ಜನರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಹೊಸ ನೇಮಕಾತಿಯ ಜವಾಬ್ದಾರಿಯನ್ನು ಸಿಎಂ ಹಿಮಂತ ಬಿಸ್ವಾಸರ್ಮನ್ ನೋಡಿಕೊಳ್ಳುತ್ತಿದ್ದರೆ, ಗೃಹ ಸಚಿವಾಲಯವು ಬದಲಿ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. (File Photo)