Indonesia Volcano: ಇಂಡೋನೇಷ್ಯಾದಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟ; ಗ್ರಾಮವೇ ನಾಪತ್ತೆ, ಹಲವರ ಸಾವು
ಇಂಡೋನೇಷ್ಯಾದ ಅತಿ ಎತ್ತರದ ಜ್ವಾಲಾಮುಖಿ ಮೌಂಟ್ ಸೆಮೆರು ಇದ್ದಕ್ಕಿದ್ದಂತೆ ಸ್ಫೋಟಿಸಿತು. ಸುಮಾರು 12 ಸಾವಿರ ಅಡಿ ಎತ್ತರದ ಪರ್ವತದ ತುದಿಯಿಂದ ಲಾವಾ, ಬಿಸಿ ಬೂದಿ ಮತ್ತು ಅನಿಲ ಹೊರಬರಲಾರಂಭಿಸಿತು. ಇದರಿಂದ ಸುತ್ತಮುತ್ತಲ ಕೆಲ ಹಳ್ಳಿ ಕಣ್ಮರೆಯಾಗಿದ್ದು, ಅನೇಕರು ಸಾವನ್ನಪ್ಪಿದ್ದಾರೆ.
ಇಂಡೋನೇಷ್ಯಾದ ಬೃಹತ್ ಸಜೀವ ಜ್ವಾಲಾಮುಖಿಗಳಲ್ಲಿ ಒಂದಾದ ಮೌಂಟ್ ಸೆಮೆರು ಜ್ವಾಲಾಮುಖಿಯು ಅತ್ಯಂತ ಬಿಸಿ ಅನಿಲವನ್ನು ಮತ್ತು ಭಾರಿ ಪ್ರಮಾಣದ ಲಾವಾರಸವನ್ನು ಏಕಾಏಕಿ ಸ್ಫೋಟಿಸಿದೆ.
2/ 7
ಮಳೆ ಬಂದ ಕಾರಣ ಜ್ವಾಲಾಮುಖಿಯ ಚಟುವಟಿಕೆ ತಗ್ಗಿತು. ಹಲವಾರು ಗ್ರಾಮಗಳು ಬೂದಿಯಿಂದ ಮುಚ್ಚಿ ಹೋಗಿದ್ದವು. ಹೊಗೆಯ ಕಾರಣ ಸೂರ್ಯ ಕಿರಣಗಳು ಭೂಮಿಗೆ ಬೀಳಲಿಲ್ಲ. ಹಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದರು. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
3/ 7
ಈ ಘಟನೆಯ ನಂತರ, ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ, ಜ್ವಾಲಾಮುಖಿಯ ಸುತ್ತಲಿನ ಅನೇಕ ಹಳ್ಳಿಗಳನ್ನು ಬೂದಿಯ ರಾಶಿಯಲ್ಲಿ ಮರೆಮಾಡಿದೆ ಅಂತ ಹೇಳಿದ್ದಾರೆ.
4/ 7
ಹೊಗೆ ಮತ್ತು ಬೂದಿಯಿಂದ ಆಕಾಶವು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜನರು ಹಗಲು ಹೊತ್ತಿನಲ್ಲಿಯೂ ಲೈಟ್ಗಳನ್ನು ಹಾಕಬೇಕಾದ ಪರಿಸ್ಥಿತಿ ಇದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
5/ 7
ಮೌಂಟ್ ಸೆಮೆರು ಜಾವಾದಲ್ಲಿದೆ, ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 800 ಕಿಮೀ ದೂರದಲ್ಲಿದೆ. ಜಾವಾದಲ್ಲಿ ಅನೇಕ ಜ್ವಾಲಾಮುಖಿಗಳಿವೆ, ಅವು ಸಕ್ರಿಯವಾಗಿವೆ. ಆದರೆ ಮೌಂಟ್ ಸೆಮೆರು ಅತ್ಯಂತ ಅಪಾಯಕಾರಿ ಮತ್ತು ಅತಿ ಎತ್ತರದ ಜ್ವಾಲಾಮುಖಿಯಾಗಿದೆ.
6/ 7
ಇಂಡೋನೇಷ್ಯಾ ಮಾತ್ರ 121 ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ. 2021 ರಲ್ಲಿ ಸೆಮೆರು ಪರ್ವತದಲ್ಲಿ ಸ್ಫೋಟ ಸಂಭವಿಸಿತ್ತು. . ನಂತರ ಅದರ ಲಾವಾ, ಬಿಸಿ ಅನಿಲ ಮತ್ತು ಬೂದಿಯಿಂದಾಗಿ 51 ಜನರು ಸಾವನ್ನಪ್ಪಿದ್ದರು.
7/ 7
ಮಾಹಿತಿಯ ಪ್ರಕಾರ, ಈ ಜ್ವಾಲಾಮುಖಿಯ ಸ್ಫೋಟದಿಂದ ಹೊರಬಂದ ಬೂದಿ, ಬಿಸಿ ಅನಿಲ ಮತ್ತು ಲಾವಾ ನದಿಗಳು ಪರ್ವತದ ಕೆಳಗೆ 8 ಕಿಲೋಮೀಟರ್ವರೆಗೂ ವ್ಯಾಪಿಸಿತ್ತು. ಸದ್ಯ ಸಮೀಪದಲ್ಲಿ ವಾಸಿಸುವ ಜನರನ್ನು 20 ಕಿಲೋಮೀಟರ್ ದೂರದಲ್ಲಿರುವ ಶಾಲೆಯಲ್ಲಿ ಇರಿಸಲಾಗಿದೆ.