Viral News: ಮೂವರು ಹೆಂಡ್ತಿಯರು, 60 ಮಕ್ಕಳು! 100 ಟಾರ್ಗೆಟ್ ಇಟ್ಟುಕೊಂಡಿರುವ ಈತ ನಾಲ್ಕನೇ ಮದ್ವೆಗೆ ಸಜ್ಜಾಗಿದ್ದಾನೆ!
Viral News: ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರು ಮೂವರು ಮದುವೆಯಾಗಿದ್ದಾರೆ ಮತ್ತು ಅವರಿಗೆ ಮೂವರು 60 ಮಕ್ಕಳಿದ್ದಾರೆ. ಹೀಗಿದ್ದರೂ ತಂದೆಯಾಗುವ ಅವಕಾಶವನ್ನು ಕಳೆದುಕೊಳ್ಳಲು ಈ ವ್ಯಕ್ತಿ ಬಯಸುವುದಿಲ್ಲವಂತೆ.
ದಿನ ಕಳೆದಂತೆ ಮನುಷ್ಯನ ಆಯಸ್ಸು, ಯೌವನ, ದೇಹದಲ್ಲಿರುವ ಶಕ್ತಿ ಕುಂದುತ್ತಾ ಹೋಗುತ್ತದೆ. ಅದನ್ನೂ ತಡೆಯಲು ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ಆದರೆ ದೇಹಕ್ಕೆ ಮಾತ್ರ ವಯಸ್ಸಾಗುತ್ತದೆ, ಮನಸ್ಸಿಗಲ್ಲ ಎಂದು ಬಲ್ಲವರು ಹೇಳುತ್ತಾರೆ.
2/ 9
ಇದಕ್ಕೆ ಸಾಕ್ಷಿ ಎಂಬಂತೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರು ಮೂವರು ಮದುವೆಯಾಗಿದ್ದಾರೆ ಮತ್ತು ಅವರಿಗೆ ಮೂವರು 60 ಮಕ್ಕಳಿದ್ದಾರೆ. ಹೀಗಿದ್ದರೂ ತಂದೆಯಾಗುವ ಅವಕಾಶವನ್ನು ಕಳೆದುಕೊಳ್ಳಲು ಈ ವ್ಯಕ್ತಿ ಬಯಸುವುದಿಲ್ಲವಂತೆ.
3/ 9
ಹಾಗಾಗಿ ಈ ವ್ಯಕ್ತಿ ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತಿದ್ದು, ಮತ್ತೊಂದು ಮದುವೆಯಾಗಲು ವಧುವನ್ನು ಹುಡುಕುತ್ತಿದ್ದಾರೆ. ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿನ ಈ ಸುದ್ದಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
4/ 9
ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತ ಯೋಚಿಸ್ತಿದ್ದೀರಾ? ಹೌದು ವೃತ್ತಿಯಲ್ಲಿ ವೈದ್ಯರಾಗಿರುವ ಸರ್ದಾರ್ ಜಾನ್ ಮೊಹಮ್ಮದ್ ಖಿಲ್ಜಿ ಅವರಿಗೆ ನಿನ್ನೆಯಷ್ಟೇ 60ನೇ ಮಗು ಜನಿಸಿದೆ. ತಮ್ಮ 60ನೇ ಮಗುವನ್ನು ಎರಡು ಕೈಗಳಲ್ಲಿ ಎತ್ತಿಕೊಂಡಿದ್ದ ಈ ವ್ಯಕ್ತಿ ಮುಖದಲ್ಲಿ ಮಂದಹಾಸ ಮೂಡಿತ್ತು.
5/ 9
ಬಾರುಕ್ ಕುಲವು ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತದೆ. ಹೀಗಾಗಿ ಸರ್ದಾರ್ ಜಾನ್ ಮೊಹಮ್ಮದ್ ಖಿಲ್ಜಿ ಅವರು ತಮ್ಮ ಸ್ನೇಹಿತರಿಗೆ ವಧುವನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದರಂತೆ.
6/ 9
ಅಲ್ಲದೇ ತಮ್ಮ ಜೀವನ ಸಂಗಾತಿಯನ್ನು ಹುಡುಕುತ್ತಿರುವ ವಿಚಾರವನ್ನು ಸರ್ದಾರ್ ಜಾನ್ ಮೊಹಮ್ಮದ್ ಖಿಲ್ಜಿ ಬ್ರಿಟಿಷ್ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ. ನಾಲ್ಕನೇ ಮದುವೆಯಾಗಲು ಹುಡುಗಿ ಸಿಗಲಿ ಎಂದು ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ.
7/ 9
ಯಾವಾಗಲೂ ಸರ್ದಾರ್ ಜಾನ್ ಮೊಹಮ್ಮದ್ ಖಿಲ್ಜಿಯವರು ಇಡೀ ಕುಟುಂಬದೊಂದಿಗೆ ಇರಲು ಬಯಸುತ್ತಾರೆ. ಅವರ ಮೂವರು ಪತ್ನಿಯರು ಕೂಡ ತಮ್ಮ ಮಕ್ಕಳನ್ನು ಜಗತ್ತಿಗೆ ತರಲು ಸಿದ್ಧರಿದ್ದಾರೆ ಎಂದಿದ್ದಾರೆ.
8/ 9
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ನಡುವೆ ಸರ್ದಾರ್ ಜಾನ್ ಮೊಹಮ್ಮದ್ ಖಿಲ್ಜಿಯವರ ಈ ಆಲೋಚನೆ ನಿಜಕ್ಕೂ ಸಾಹಸವೇ ಎಂದು ಹೇಳಬಹುದು.
9/ 9
ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಈ ನಡುವೆ ಇವರ ಈ ಚಿಂತನೆ ಎಷ್ಟು ಸರಿಯಾಗಿದೆ ಎಂಬುದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ.