Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

ಮನೆಯ ನೆಲ ಮತ್ತು ಗೋಡೆಗಳ ಮೇಲೆ ಹಸುವಿನ ಸಗಣಿ ಲೇಪಿಸುತ್ತಾರೆ. ಇದರಿಂದಾಗಿ ಮನೆ ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಜೊತೆಗೆ ಬೇಸಿಗೆಯಲ್ಲಿ ತಂಪಾಗಿರುತ್ತದೆ.

First published:

  • 17

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಎಲ್ಲೆಲ್ಲೂ ಬಿಸಿಲೇ ಬಿಸಿಲು! ಈ ಬಿಸಿಲ ತಾಪದಿಂದ ಬಚಾವ್ ಆಗುವುದೇ ದೊಡ್ಡ ಕೆಲಸ ಎಂಬ ದಿನಗಳಿವು. ಬಿಸಿಲನ್ನು ತಡೆಯಲು ಸಾರ್ವಜನಿಕರು ನಾನಾ ವಿಧಾನಗಳಿಗೆ ಮೊರೆ ಹೋಗುತ್ತಿದ್ದಾರೆ.

    MORE
    GALLERIES

  • 27

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಮನೆಯನ್ನು ತಂಪಾಗಿರಿಸಲು ಗೋಡೆಗಳಿಗೆ ಹಸುಗಳ ಸಗಣಿ ಹಚ್ಚುವ ರೂಢಿ ಭಾರತದಲ್ಲಿ ಬಹಳ ಹಿಂದಿನಿಂದಲೂ ಇದೆ. ಅದೇ ರೀತಿ ಕಾರುಗಳಿಗೆ ಸಗಣಿ ಬಳಿದರೆ ಏನಾಗುತ್ತೆ? ವೈದ್ಯರೊಬ್ಬರು ಹೀಗೆ ಮಾಡಿರುವುದು ಈಗ ಭಾರೀ ವೈರಲ್ ಆಗ್ತಿದೆ.

    MORE
    GALLERIES

  • 37

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಸಾಮಾನ್ಯವಾಗಿ ಬಿಸಿಲಿನ ತಾಪದಿಂದ ಪಾರಾಗಲು ಜನರು ಎಸಿ ಚಾಲನೆಯಲ್ಲಿರುವ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ಬುಂದೇಲಖಂಡದ ಸಾಗರದಲ್ಲಿ ಹೋಮಿಯೋಪತಿ ವೈದ್ಯರೊಬ್ಬರು ಕಾರನ್ನು ತಂಪಾಗಿರಿಸಲು ಹಸುವಿನ ಸಗಣಿ ಲೇಪಿಸಿದ್ದಾರೆ. ಹಸುವಿನ ಸಗಣಿ ಹಚ್ಚುವುದರಿಂದ ಶಾಖ ಕಡಿಮೆಯಾಗಿ ಒಳಭಾಗ ತಂಪಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

    MORE
    GALLERIES

  • 47

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಡಾ. ಸುಶೀಲ್ ಸಾಗರ್ ಅವರು ಜಾರುಖೇಡ ಆರೋಗ್ಯ ಸೇತು ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಶೀಲ್ ಸಾಗರ್ ಎಂಬುವರು ತಮ್ಮ ಮಾರುತಿ ಆಲ್ಟೊ 800 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ದಿನಗಳಲ್ಲಿ ಬಿಸಿಲು 41 ಡಿಗ್ರಿ ತಲುಪಿತ್ತು. ಹೀಗಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಶಾಖದಿಂದ ಉಪಶಮನ ಪಡೆಯಲು ಸಾಗರ್ ಈ ವಿಧಾನವನ್ನು ಆರಿಸಿಕೊಂಡಿದ್ದಾರೆ.

    MORE
    GALLERIES

  • 57

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಹೀಗೆ ಹಸುವಿನ ಸಗಣಿಯನ್ನು ಕಾರಿಗೆ ಲೇಪಿಸಿದರೆ ಸೂರ್ಯನ ಕಿರಣಗಳು ನೇರವಾಗಿ ಕಾರಿನ ಕವರ್ ಮೇಲೆ ಬೀಳುವುದಿಲ್ಲ ಎನ್ನುತ್ತಾರೆ ಕಾರಿಗೆ ಕೋಟಿಂಗ್ ಹಾಕಿದ ಡಾ.ಸುಶೀಲ್ ಸಾಗರ್. ಹಸುವಿನ ಸಗಣಿಯಿಂದ ಕಾರು ತಂಪಾಗಿರುತ್ತದೆ ಎಂಬುದು ಅವರ ಅಭಿಪ್ರಾಯ.

    MORE
    GALLERIES

  • 67

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಕಾರಿನ ಮೇಲೆ ಹಸುವಿನ ಸಗಣಿ ಹಾಕುವುದರಿಂದ ಹೊರಗಿನ ಪರಿಸರದ ಶಾಖ ಒಳಗೆ ಬರುವುದಿಲ್ಲ ಎನ್ನುತ್ತಾರೆ ಡಾ. ಸುಶೀಲ್ ಸಾಗರ್.

    MORE
    GALLERIES

  • 77

    Cow Dung Car: ಇಡೀ ಕಾರಿಗೆ ಸಗಣಿ ಹಚ್ಚಿದ ವೈದ್ಯ!

    ಇಂದಿಗೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಮನೆಯ ನೆಲ ಮತ್ತು ಗೋಡೆಗಳ ಮೇಲೆ ಹಸುವಿನ ಸಗಣಿ ಲೇಪಿಸುತ್ತಾರೆ. ಇದರಿಂದಾಗಿ ಮನೆ ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಜೊತೆಗೆ ಬೇಸಿಗೆಯಲ್ಲಿ ತಂಪಾಗಿರುತ್ತದೆ.

    MORE
    GALLERIES