ಅಲ್ಲಿಯ ಜನ ದೆವ್ವ ಹಿಡಿದಂತೆ ವರ್ತಿಸುತ್ತಿರುವುದು ನಿಗೂಢವಾಗಿ ಪರಿಣಮಿಸಿದೆ. ಇದರಿಂದ ಗ್ರಾಮಸ್ಥರು ಮಂತ್ರವಾದಿಯನ್ನು ಕರೆಸಿದ್ದಾರೆ. ಆದರೂ ಕೂಡ ಈ ದೆವ್ವ ಬಂದವರಂತೆ ವರ್ತಿಸುವವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆ ಪೆಡಬಯಲು ತಾಲೂಕಿನ ರೂಢಕೋಟ ಮತ್ತು ಪಾಡೇರು ಮಂಡಲದ ಗುರಗರರೂವು ಗ್ರಾಮಗಳಲ್ಲಿ ಸರಣಿ ಶಿಶುಮರಣ ಸಂಭವಿಸಿತ್ತು.
ಇದೀಗ ಪದೇ ಪದೇ ಸಾವನ್ನಪ್ಪುತ್ತಿರುವುದರಿಂದ ಗ್ರಾಮಸ್ಥರ ಆತಂಕ ತಾರಕಕ್ಕೇರಿದೆ. ಗ್ರಾಮದಲ್ಲಿ ಇಂತಹ ಪರಿಸ್ಥಿತಿಯಿಂದಾಗಿ ಗ್ರಾಮಸ್ಥರು ಎಲ್ಲ ಮಕ್ಕಳನ್ನು ತಮ್ಮ ಮನೆಗಳಿಗೆ ಸೀಮಿತಗೊಳಿಸಿದ್ದಾರೆ. ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಈ ವೈದ್ಯಕೀಯ ಶಿಬಿರದಲ್ಲಿ ಮೂವರು ವೈದ್ಯಕೀಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮಸ್ಥರ ಸ್ಥಿತಿಗತಿಯನ್ನು ಗಮನಿಸುತ್ತಿದ್ದಾರೆ. ಪೆದಬಯಲು ಕಡೆಯಿಂದ ವೈದ್ಯಕೀಯ ತಂಡ ಬಂದು ಗ್ರಾಮದಲ್ಲಿ ವಾಸ್ತವ್ಯ ಹೂಡಿದೆ.