Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಅನೇಕ ಕಾರಣಗಳಿಗೆ ಆಗಾಗ ಸುದ್ದಿಯಾಗುತ್ತಿರುತ್ತದೆ. ಆದರೆ ದೆಹಲಿ ಮೆಟ್ರೋ ಮಾತ್ರ ಯುವ ಜೋಡಿಗಳ ಏನಾದರೂ ಕಿತಾಪತಿಗೆ ಪದೇ ಪದೇ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುತ್ತೆ.

First published:

  • 17

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಯುವ ಪ್ರೇಮಿಗಳಿಬ್ಬರು ಲಿಪ್‌ಲಾಕ್‌ ಮಾಡುವ ವಿಡಿಯೋ ವೈರಲ್‌ ಆಗಿ ಭಾರೀ ಸೌಂಡ್ ಮಾಡಿತ್ತು. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತನೆ ಮಾಡೋದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

    MORE
    GALLERIES

  • 27

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಇದೀಗ ಯುವಕ ಯುವತಿಯರಿಬ್ಬರು ಆತ್ಮೀಯವಾಗಿ ಕುಳಿತಿದ್ದ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಈ ವಿಷಯ ಇನ್ನೊಂದು ಆಯಾಮದಲ್ಲಿ ಚರ್ಚೆಯಾಗುತ್ತಿದೆ.

    MORE
    GALLERIES

  • 37

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಅಭಿನವ್ ಠಾಕೂರ್ ಎಂಬಾತ ಯುವ ಜೋಡಿ ಮೆಟ್ರೋದಲ್ಲಿ ಆಪ್ತವಾಗಿ ಕುಳಿತಿದ್ದ ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ‘ನನಗೆ ತುಂಬಾ ಅಸಹ್ಯ ಅನಿಸುತ್ತಿದೆ. ದಯವಿಟ್ಟು ಸಹಾಯ ಮಾಡಿ’ ಎಂದು ಕ್ಯಾಪ್ಶನ್ ಕೊಟ್ಟಿದ್ದ.

    MORE
    GALLERIES

  • 47

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಹಾಗೆ ನೋಡಿದ್ರೆ ಆತ ಹಂಚಿಕೊಂಡಿರೋ ವಿಡಿಯೋದಲ್ಲಿ ಅಸಭ್ಯವಾಗುವಂತಹ ವರ್ತನೆಗಳೇನೂ ಇಲ್ಲ. ಹುಡುಗಿ ತನ್ನ ಗೆಳೆಯನ ಹೆಗಲಿಗೆ ತಲೆ ಇಟ್ಟು ಮಲಗಿದ್ದಾಳೆ. ಆತ ಆಕೆಯ ಹೆಗಲಿಗೆ ಕೈ ಹಾಕಿದ್ದಾನೆ ಅಷ್ಟೇ. ಇದನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಅಭಿನವ್ ಠಾಕೂರ್ ಎಂಬಾತನ ಮೇಲೆ ನೆಟ್ಟಿಗರು ಮುಗಿಬಿದ್ದಿದ್ದಾರೆ.

    MORE
    GALLERIES

  • 57

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಕಾಮೆಂಟ್‌ನಲ್ಲಿ ಕೆಲವರು ‘ಇಬ್ಬರು ಪ್ರೀತಿಯಿಂದ ಜತೆಗೆ ಕುಳಿತಿದ್ದಾರೆ. ಇದರಲ್ಲಿ ಅಸಹ್ಯವಾಗುವಂತಹದ್ದೇನಿದೆ? ಇದು ಆತ್ಮೀಯತೆ ಅಷ್ಟೇ. ನಿಮಗೆ ನೋಡೋಕೆ ಆಗದಿದ್ದರೆ ಕಣ್ಮುಚ್ಚಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    MORE
    GALLERIES

  • 67

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಇನ್ನೊಬ್ಬರು ಕಾಮೆಂಟ್ ಮಾಡಿ ‘ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ.ಫಸ್ಟ್ ಆಫ್ ಆಲ್ ನೀವು ಅನುಮತಿ ಇಲ್ಲದೆ ವಿಡಿಯೋ ಮಾಡಿದ್ದೇ ಅಪರಾಧ ಎಂದು ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 77

    Delhi Metro: ದೆಹಲಿ ಮೆಟ್ರೋದಲ್ಲಿ ಲಿಪ್‌ಲಾಕ್‌ ವಿಡಿಯೋ ಹರಿದಾಡಿದ ಬೆನ್ನಲ್ಲೇ ಮತ್ತೊಂದು ದೃಶ್ಯ ವೈರಲ್

    ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋದಲ್ಲಿ ಅಸಭ್ಯವಾಗಿ ವರ್ತಿಸುವ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಇದನ್ನೇ ಗುರಾಣಿಯಾಗಿರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಲು ಆತ ಸಹಜ ವಿಡಿಯೋವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಪಬ್ಲಿಷ್ ಮಾಡಿದ್ದಾನೆ ಎಂದು ಜನರು ವಿಡಿಯೋ ಮಾಡಿದವನಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

    MORE
    GALLERIES