ನ್ಯೂಸ್ ಪೋರ್ಟಲ್ ಪರ್ತ್ ನೌ ಈ ಪತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ. ಇದರ ಪ್ರಕಾರ “ ಹಲೋ ನೇಬರ್, ನೀವು ಅಡುಗೆ ಮಾಡುವಾಗ ನಿಮ್ಮ ಅಡುಗೆ ಮನೆಯ ಕಿಟಕಿಯನ್ನು ದಯವಿಟ್ಟು ಮುಚ್ಚಿ. ನನ್ನ ಕುಟುಂಬದವರು ಸಸ್ಯಾಹಾರಿಗಳು. ನೀವು ಬೇಯಿಸುವ ಮಾಂಸದ ವಾಸನೆ ಸಹಿಸಲು ಆಗುತ್ತಿಲ್ಲ ಮತ್ತು ಅನಾರೋಗ್ಯ ಉಂಟುಮಾಡುತ್ತಿದೆ. ನಮ್ಮ ಕಷ್ಟವನ್ನು ನೀವು ಅರ್ಥಮಾಡಿಕೊಳ್ಳಬಹುದು ಎಂದು ಭಾವಿಸುತ್ತೇವೆ. ಧನ್ಯವಾದಗಳು." ಎಂದು ಬರೆದಿರುವ ಪತ್ರವನ್ನು ಹೇ ಪರ್ತ್ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ನಂತರ ಅದನ್ನು ಡಿಲೀಟ್ ಮಾಡಲಾಗಿದೆ. ಆದರೂ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. (Credits: Twitter/@perthnow
ಮತ್ತೊಬ್ಬ ನೆಟ್ಟಿಗ, " ಸಸ್ಯಾಹಾರಿ ಜೀವನಶೈಲಿ ಪರಿಸರಕ್ಕೆ ಹಾನಿಕರ ಎಂದು ಹೇಳಿದ್ದಾರೆ. ಸಸ್ಯಾಹಾರಿಗಳಿಗೆ ಅವರು ಮಾಡುತ್ತಿರುವ ಹಾನಿಯ ಬಗ್ಗೆ ತಿಳಿಸಬೇಕಿದೆ. ಸಸ್ಯಾಹಾರಿಗಳು ಭೂಮಿಯ ಮೇಲೆ ಆಮ್ಲಜನಕ ಉತ್ಪಾದಿಸುವ ಸಸ್ಯಗಳನ್ನು ತಿನ್ನುತ್ತಾರೆ, ಆದ್ದರಿಂದ ಸಸ್ಯಾಹಾರಿಗಳು ಇದನ್ನು ಮುಂದುವರೆಸಿದರೆ, ಅವರು ಪ್ರಾಣಿಗಳು ಸೇರಿದಂತೆ ನಮ್ಮೆಲ್ಲರನ್ನೂ ಕೊಲ್ಲುತ್ತಾರೆ '"ಎಂದಿದ್ದಾರೆ. (ಸಾಂದರ್ಭಿಕ ಚಿತ್ರ)