ಮದುವೆ ಎಂದರೆ ಏಳೇಳು ಜನ್ಮಗಳ ಬಂಧ ಎಂದು ಹೇಳಲಾಗುತ್ತದೆ. ಬಹುತೇಕರು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುತ್ತಾರೆ. ತಮ್ಮ ಸಂಗಾತಿಯೊಂದಿಗಿನ ಈ ಸಂಭ್ರಮದ ಕ್ಷಣವನ್ನು ಎಂದಿಗೂ ಮರೆಯಬಾರದು ಎಂದು ಹಲವು ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ವೆಚ್ಛವನ್ನೂ ಮಾಡುತ್ತಾರೆ. ಆದರೆ ಇತ್ತೀಚೆಗೆ ಹಲವು ವಿವಾಹಗಳು ಕ್ಷುಲ್ಲಕ ಕಾರಣಕ್ಕೆ ರದ್ದಾಗುತ್ತಿವೆ. ಕೆಲವು ವಿವಾಹಗಳು ವರನಿಗೆ ಬೋಳು ತಲೆ ಇದೆ, ಮದುಮಗನಿಗೆ ಇಂಗ್ಲಿಷ್ ಬರುವುದಿಲ್ಲ, ಕುಡಿಯುತ್ತಾನೆ, ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ರದ್ದಾಗಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯುಪಿಯ ಕಾನ್ಪುರ ನಗರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯ ನಂತರ ದಂಪತಿ ವಾರಣಾಸಿಯಿಂದ 700 ಕಿಮೀ ದೂರದ ವರನ ಊರಾದ ರಾಜಸ್ಥಾನದ ಸರ್ಸೋಲ್ಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿ 7 ಗಂಟೆ ಪ್ರಯಾಣಿಸಿದ ನಂತರ ವರ ಒಂದು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದು, ಎಲ್ಲರೂ ಅಲ್ಲಿಯೇ ಉಪಹಾರ ಸೇವಿಸಲು ನಿರ್ಧರಿಸಿದ್ದಾರೆ.
ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಗಂಡನ ಮನೆಯವರು ವಿವಾಹದ ಸಂದರ್ಭದಲ್ಲಿ ಅಲಹಾಬಾದ್ನಲ್ಲಿ ಇರುತ್ತೇವೆ ಎಂದಿದ್ದರು, ಇದೀಗ ರಾಜಸ್ತಾನದ ಬಿಕಾನೇರ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಮನೆಯಿಂದ ತುಂಬಾ ದೂರ ಹೋಗಲು ಬಯಸುವುದಿಲ್ಲ. ನಾನು ನನ್ನ ತಂದೆ ತಾಯಿಯ ಹತ್ತಿರ ಇರಲು ಬಯಸುತ್ತೇನೆ, ಈ ಮದುವೆಯನ್ನು ಮುರಿದುಕೊಳ್ಳುತ್ತೇನೆ ಎಂದು ವೈಷ್ಣವಿ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.