ಸಾಮಾನ್ಯವಾಗಿ ಹಾವುಗಳು ಹೊಲ, ಬೆಟ್ಟ, ಕಾಡುಗಳಲ್ಲಿ ಕಾಣಸಿಗುತ್ತವೆ. ಅಪರೂಪಕ್ಕೆ ಮನೆಗಳ ಒಳಗೆ ಬರುತ್ತವೆ. ಅಂತೆಯೇ ಕಾಡುಗಳಲ್ಲಿ, ಹಳೆ ಕಟ್ಟಡಗಳಲ್ಲಿ ಇಲಿಗಳನ್ನು ತಿನ್ನಲು ಹಾವುಗಳು ಬರುತ್ತವೆ. ಆದರೆ ಮರದ ಮೇಲೆ ಹತ್ತಾರು ಹಾವುಗಳು ಇರುವುದನ್ನು ಸ್ಥಳೀಯರು ಗಮನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.