ಬುಂದೇಲ್‌ಖಂಡ್ ವಿಶ್ವವಿದ್ಯಾಲಯವು ಮೇ 16 ರಂದು ಬಿಎ ಅಂತಿಮ ವರ್ಷದ ಪರೀಕ್ಷೆಯನ್ನು ನಡೆಸಿತ್ತು. ಕೃಷ್ಣ ರಜಪೂತ ಅವರ ಪರೀಕ್ಷಾ ಕೇಂದ್ರವು ಪ್ರೇಮ್ ನಗರದ ವಿವೇಕಾನಂದ ಪದವಿ ಕಾಲೇಜಿನಲ್ಲಿ ಇತ್ತು. ಬುಂದೇಲ್‌ಖಂಡ್ ಸಂಪ್ರದಾಯದ ಪ್ರಕಾರ, ಫೆರಾಗಳು ಮುಗಿದ ನಂತರ, ವಧು ಬೇರೆಲ್ಲಿಯೂ ಹೋಗಬಾರದು. ಆದರೆ ಈಕೆ ಮಾತ್ರ ತನಗೆ ಮದುವೆಗಿಂತ ಪರೀಕ್ಷೆಯ ಮುಖ್ಯ ಎಂದು ನಿರ್ಧರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸ್ಥಳೀಯ ಚುನಾವಣೆಗಳು ನಡೆಯುತ್ತಿದ್ದವು. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೇ ಸಂದರ್ಭದಲ್ಲಿ ವಧು ಮತ್ತು ಆಕೆಯ ಕುಟುಂಬ ಮುಂದೂಡಲ್ಪಟ್ಟ ಪರೀಕ್ಷೆ ಮದುವೆ ದಿನ ನಡೆದರೆ ಏನು ಮಾಡುವುದು ಎಂದು ಕೇಳಿದ್ದಕ್ಕೆ, ಪ್ರಾಂಶುಪಾಲರು ಕೃಷ್ಣ ಮದುವೆ ದಿನ ಬಂದು ಪರೀಕ್ಷೆ ಬರೆಯಬಹುದು, ಆಕೆಗೆ ಯಾವ ರೀತಿಯ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದ್ದರು. ಬೇಗ ಹೋಗುವುದಕ್ಕೂ ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾಗಿ ಶ್ಯಾಮ್ ಜಿ ಮಿಶ್ರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.